ADVERTISEMENT

ಇದು ‘ಶ್ರೀಪ್ರದ’ ನೆಲೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 19:30 IST
Last Updated 13 ಏಪ್ರಿಲ್ 2017, 19:30 IST
ಇದು ‘ಶ್ರೀಪ್ರದ’ ನೆಲೆ
ಇದು ‘ಶ್ರೀಪ್ರದ’ ನೆಲೆ   

ನಮ್ಮ ಮನೆಗೆ ಶ್ರೀಪ್ರದ ಎಂದು ಹೆಸರಿಟ್ಟಿದ್ದೇವೆ. ಕಷ್ಟಪಟ್ಟು 20 ವರ್ಷಗಳ ಹಿಂದೆ ಮನೆಯನ್ನು ಕಟ್ಟಿಸಿದ್ದೆವು. ಮನೆಗೆ ಏನೆಂದು ಹೆಸರಿಡುವುದು ಎಂದ ಚರ್ಚೆ ನಡೆದಾಗ ಹೊಳೆದದ್ದೇ ಈ ಹೆಸರು.

ದೇವರ ಕೃಪೆ ಹಾಗೂ ಪತಿಯ  ಶ್ರಮದಿಂದ 60X40 ನಿವೇಶನದಲ್ಲಿ ಮನೆ ನಿರ್ಮಾಣ ಸಾಧ್ಯವಾಯಿತು. ಹಾಗಾಗಿ ಇವರಿಬ್ಬರ ಹೆಸರನ್ನು ಸೇರಿಸಿ ಮನೆಗೆ ನಾಮಕರಣ ಮಾಡಿದ್ದೇವೆ.

ಶ್ರೀನಿವಾಸ ನಮ್ಮ  ಮನೆ ದೇವರು. ನನ್ನ ಪತಿಯ ಹೆಸರು ಶ್ರೀಧರ್. ‘ಪ್ರದ’ ಎಂದರೆ ಅತ್ಯಂತ ಉನ್ನತದ ವರ ಎಂಬ ಅರ್ಥ. ಇವೆಲ್ಲವುಗಳ ಸಂಗಮವೇ ‘ಶ್ರೀಪ್ರದ’.

ADVERTISEMENT

-ಚೇತನ ಶ್ರೀಧರ್,  ಹೇರೋಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.