ADVERTISEMENT

ಈ ಸಸ್ಯಗಳಿದ್ದರೆ ನಿಮ್ಮನೆ ಕೂಲ್

ಮಂಜುಶ್ರೀ ಎಂ.ಕಡಕೋಳ
Published 6 ಏಪ್ರಿಲ್ 2017, 19:30 IST
Last Updated 6 ಏಪ್ರಿಲ್ 2017, 19:30 IST
ಈ ಸಸ್ಯಗಳಿದ್ದರೆ ನಿಮ್ಮನೆ ಕೂಲ್
ಈ ಸಸ್ಯಗಳಿದ್ದರೆ ನಿಮ್ಮನೆ ಕೂಲ್   
ಬೇಸಿಗೆಯ ಬಿರುಬಿಸಿಲಿನಲ್ಲಿ ದಣಿದ ಮೈಮನಕ್ಕೆ ಮನೆಗೆ ಹಿಂತಿರುಗಿದಾಗ ತಂಪಾದ ಗಾಳಿ ಸಿಕ್ಕರೆ ಅದಕ್ಕಿಂತ ಸುಖ ಮತ್ತೊಂದಿಲ್ಲ. ಮನೆಯ ವಾತಾವರಣವನ್ನು ತಂಪಾಗಿಸುವ ಸಸ್ಯಗಳನ್ನು ಬೆಳೆಸುವುದು ಈ ಸುಖ ಅನುಭವಿಸಲು ಇರುವ ಉತ್ತಮ ಮಾರ್ಗ. ಈ ಸಸ್ಯಗಳು ಬೇಸಿಗೆಯಲ್ಲಿ ತಂಪು ವಾತಾವರಣ ಸೃಷ್ಟಿಸುವ  ಜೊತೆಗೆ ಶುದ್ಧ ಆಮ್ಲಜನಕವನ್ನೂ ಬೋನಸ್‌ ಆಗಿ ನೀಡುತ್ತವೆ.
 
ಜರಿಗಿಡ (ಬೋಸ್ಟನ್ ಗಿಡ)
ಸಾಮಾನ್ಯ ಭಾಷೆಯಲ್ಲಿ ಜರಿ ಗಿಡ ಎಂದು ಕರೆಯಲ್ಪಡುವ ಬೋಸ್ಟನ್, ಅಲಂಕಾರಿಕ ಸಸ್ಯ ಮಾತ್ರವಲ್ಲ.  ಆರೋಗ್ಯಕರ ಗುಣಗಳಿಗಾಗಿಯೂ ಖ್ಯಾತಿ ಹೊಂದಿದೆ. ಗಾಳಿ ಶುದ್ಧೀಕರಣದ ಗುಣ  ಹೊಂದಿರುವ ಈ ಗಿಡ, ಮನೆಯನ್ನು ತಂಪಾಗಿಡುತ್ತದೆ.
 
ಅರೆಕಾ ತಾಳೆಮರ
ಈ ಪುಟ್ಟ ಮರ ಗಾಳಿಯಲ್ಲಿರುವ ವಿಷಾನಿಲ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಶುದ್ಧೀಕರಿಸುತ್ತದೆ.  ಅಷ್ಟೇ ಅಲ್ಲ ಮನೆಯ ತೇವಾಂಶವನ್ನೂ ಹಿಡಿದಿಡುತ್ತದೆ.
 
ಸ್ನೇಕ್ ಪ್ಲಾಂಟ್‌
ಸಾಮಾನ್ಯವಾಗಿ ಸಸ್ಯಗಳು ರಾತ್ರಿ ಹೊತ್ತು ಆಮ್ಲಜನಕವನ್ನು ಹೀರಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಗೆ ಬಿಡುತ್ತವೆ. ಆದರೆ, ಸ್ನೇಕ್‌ ಪ್ಲಾಂಟ್ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಸ್ಯ ರಾತ್ರಿ ವೇಳೆ ಇಂಗಾಲದ ಡೈ ಆಕ್ಸೈಡ್ ಹೀರಿ ಆಮ್ಲಜನಕವನ್ನು ಹೊರಸೂಸುತ್ತದೆ.  ಹಾಗಾಗಿ, ಬಹಳಷ್ಟು ಮನೆಗಳ ಬೆಡ್‌ರೂಂ ಇಲ್ಲವೇ ಕಚೇರಿಗಳಲ್ಲಿ ಸ್ನೇಕ್ ಪ್ಲಾಂಟ್‌ಗೆ ಕಾಯಂ ಸ್ಥಾನ.
ಫಿಕಸ್ ಮರ
ಪುಟ್ಟ ಮರದ ಆಕಾರದಲ್ಲಿರುವ ಫಿಕಸ್‌ ಗಾಳಿಯಲ್ಲಿರುವ ಮಾಲಿನ್ಯವನ್ನು ತಡೆದು, ದುರ್ವಾಸನೆಯನ್ನೂ ನಿವಾರಿಸುತ್ತದೆ. ಬಿಸಿಲಿನ ತಾಪವನ್ನು ಸಹಿಸುವ ಗುಣವುಳ್ಳ ಈ ಸಸ್ಯ ಮನೆಯನ್ನು ತಂಪಾಗಿಸುತ್ತದೆ. ಇದನ್ನು ಮನೆಯ ವರಾಂಡ ಇಲ್ಲವೇ ಬಿಸಿಲು ಬೀಳುವ  ಜಾಗದಲ್ಲಿರಿಸುವುದು ಉತ್ತಮ. ಇದು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನೂ ಉತ್ಪಾದಿಸುವುದರಿಂದ ಶುದ್ಧ ಗಾಳಿಯೂ ದೊರೆಯುತ್ತದೆ.
ಲೋಳೆಸರ (ಆಲೊವೆರಾ)
ಔಷಧೀಯ ಗುಣಗಳಿಂದ ಪ್ರಸಿದ್ಧಿಯಾಗಿರುವ ಲೋಳೆಸರ ಮನೆಯ ಉಷ್ಣಾಂಶವನ್ನು ಕಡಿಮೆ ಮಾಡಲು ಸಹಕಾರಿ. ಕಲುಷಿತ ಗಾಳಿಯಲ್ಲಿರುವ ಕೆಲ ರಾಸಾಯನಿಕ ಅಂಶವನ್ನೂ ತಡೆಯುತ್ತದೆ.  ಸೊಳ್ಳೆ ನಿವಾರಕವೂ ಹೌದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.