ADVERTISEMENT

ಕನ್ನಡಿಯಂಥ ಕಟ್ಟಡಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
30 ಸೇಂಟ್ ಮೇರಿ ಆ್ಯಕ್ಸ್
30 ಸೇಂಟ್ ಮೇರಿ ಆ್ಯಕ್ಸ್   

30 ಸೇಂಟ್ ಮೇರಿ ಆ್ಯಕ್ಸ್
ಲಂಡನ್‌ ನಗರದ ಮಧ್ಯಭಾಗದಲ್ಲಿ ಈ ಕಟ್ಟಡ ಇದೆ. 2001ರಲ್ಲಿ ಆರಂಭವಾದ ಇದರ ನಿರ್ಮಾಣ ಕಾರ್ಯ 2003ರಲ್ಲಿ ಮುಗಿಯಿತು. 2004ರಲ್ಲಿ ಉದ್ಘಾಟನೆಯಾಯಿತು. ಮೊದಲು ಇದನ್ನು 91 ಅಂತಸ್ತಿನ ಕಟ್ಟಡವಾಗಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ 41 ಅಂತಸ್ತಿಗೆ ಸೀಮಿತಗೊಳಿಸಲಾಯಿತು. ಇದರಲ್ಲಿ ಚರ್ಚ್‌ ಸೇರಿದಂತೆ, ಕಾರ್ಪೊರೇಟ್‌ ಕಚೇರಿಗಳು, ಬ್ಯಾಂಕ್‌ಗಳು, ಷಾಪಿಂಗ್‌ ಮಾಲ್ಸ್‌, ಸಿನಿಮಾ ಹಾಲ್ಸ್‌ ಇವೆ.

*

ಸೌಂಡ್‌ ಅಂಡ್ ವಿಷನ್‌
ಬಣ್ಣ ಬಣ್ಣದ ಗಾಜಿನಿಂದ ಕಂಗೊಳಿಸುವ ಈ ಕಟ್ಟಡ ನೆದರ್ಲ್ಯಾಂಡ್ಸ್‌ನ ಹಿಲ್‌ವೇರ್ಸಮ್‌ ನಗರದಲ್ಲಿ ಇದೆ. 2014ರಲ್ಲಿ ನಿರ್ಮಾಣವಾಯಿತು. ಇದೊಂದು ಅದ್ಭುತವಾದ ಆಡಿಯೊ ವಿಷುವಲ್‌ ಮ್ಯೂಸಿಯಂ. ಇದರಲ್ಲಿ ಸುಮಾರು 7.50 ಲಕ್ಷ ಗಂಟೆ ಅವಧಿಯ ಆಡಿಯೊ ತುಣುಕುಗಳನ್ನು ಸಂಗ್ರಹಿಸಿ ಇಡಲಾಗಿದೆ.

ADVERTISEMENT

ವಿವಿಧ ಭಾಷೆಯ ಸಿನಿಮಾ, ಕಿರುಚಿತ್ರ, ಸಾಕ್ಷ್ಯ ಚಿತ್ರಗಳ ಆಡಿಯೊ ತುಣುಕುಗಳು ಇಲ್ಲಿವೆ. 1898ರಿಂದ ಇಲ್ಲಿಯವರೆಗಿನ ಕೆಲವು ಆಡಿಯೊ ತುಣುಕುಗಳನ್ನು ಸಂಗ್ರಹಿಸಿರುವುದು ವಿಶೇಷ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.