ADVERTISEMENT

ತೋಟದ ಅಂದ ಹೆಚ್ಚಿಸುವ ಟೈರ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 19:30 IST
Last Updated 30 ನವೆಂಬರ್ 2017, 19:30 IST
ತೋಟದ ಅಂದ ಹೆಚ್ಚಿಸುವ ಟೈರ್‌
ತೋಟದ ಅಂದ ಹೆಚ್ಚಿಸುವ ಟೈರ್‌   

ದಿನಬಳಕೆಗೆ ಅನುಪಯುಕ್ತ ಎನಿಸಿದ ಅನೇಕ ವಸ್ತುಗಳು ಕೈತೋಟದಲ್ಲಿ ಕೆಲಸಕ್ಕೆ ಬರುತ್ತವೆ. ಬಾಟಲಿಗಳನ್ನು ಗಿಡ ಬೆಳಸಲು ಬಳಸುವಂತೆ, ಟೈರ್‌ಗಳಲ್ಲಿಯೂ ಗಿಡಗಳನ್ನು ಬೆಳೆಸಲು ಸಾಧ್ಯವಿದೆ. ಇನ್ನುಮುಂದೆ ಹಳೆಯ ಟೈರ್‌ಗಳನ್ನು ಬಿಸಾಡಬೇಡಿ, ಅದರಲ್ಲಿ ಗಿಡನೆಟ್ಟು ಕೈತೋಟದ ಅಂದ ಹೆಚ್ಚಿಸಿ.

* ವೃತ್ತಾಕಾರದ ಟೈರ್‌ ಒಳಗೆ ಮಣ್ಣು ತುಂಬಿ ಕುಂಡದಂತೆ ಬಳಸಬಹುದು. ಟೈರ್‌ಗಳಿಗೆ ಬಣ್ಣ ಬಳಿದರೆ ಕೈತೋಟದ ಅಂದವೂ ಹೆಚ್ಚುತ್ತದೆ

* ಟೈರ್‌ಗಳನ್ನು ಸಮ ಅರ್ಧಭಾಗಕ್ಕೆ ಕತ್ತರಿಸಿ, ಅದರ ತುದಿಯನ್ನು ತೂತು ಮಾಡಿ ಸೆಣಬಿನ ದಾರ ಹಾಕಿ. ಮಧ್ಯೆ ಮಣ್ಣನ್ನು ತುಂಬಿ, ನೇತು ಹಾಕಿ ಗಿಡ ಬೆಳೆಯಬಹುದು

ADVERTISEMENT

* ಒಂದು ಟೈರ್‌ನಲ್ಲಿ ನಾಲ್ಕೈದು ಗಿಡಗಳನ್ನು ಬೆಳೆಯುವುದು ಸಾಧ್ಯವಿದೆ. ದೊಡ್ಡ ಟೈರ್‌ನಲ್ಲಿ ನಾಲ್ಕು ತೂತು ಮಾಡಿ ಒಳಗೆ ಮಣ್ಣನ್ನು ತುಂಬಿ. ಈಗ ಆ ನಾಲ್ಕು ತೂತಿನಲ್ಲಿ ಗಿಡಗಳನ್ನು ಬೆಳೆಯಬಹುದು. ಹೂವಿನ ಗಿಡಗಳನ್ನು ಹೀಗೆ ಬೆಳೆದರೆ ಚೆನ್ನಾಗಿ ಕಾಣುತ್ತದೆ

* ಹೀಗೆ ಟೈರ್‌ಗಳಲ್ಲಿ ಗಿಡ ಬೆಳೆಯುವಾಗ ಒಮ್ಮೆ ನೀರು ಹಾಕಿದರೆ ಸಾಕು. ಇದರಲ್ಲಿ ಕಡಿಮೆ ಸ್ಥಳಾವಕಾಶ ಇರುವುದರಿಂದ ಹೆಚ್ಚು ನೀರು ಹಾಕಬಾರದು

* ಒಂದು ದೊಡ್ಡ ಟೈರ್‌ ತೆಗೆದುಕೊಂಡು, ಅದರ ಮೇಲೊಂದು ಚಿಕ್ಕ ಟೈರ್‌ ಇರಿಸಿ. ಅದರ ಮೇಲೆ ಅದಕ್ಕಿಂತ ಸ್ವಲ್ಪ ದೊಡ್ಡ ಟೈರ್‌ ಇಡಿ. ಈ ಮೂರಕ್ಕೂ ನಿಮ್ಮಿಷ್ಟದ ಬಣ್ಣ ಹಚ್ಚಿ. ಇದರ ಬದಿಗೆ ಬಿದಿರಿನ ಕೋಲನ್ನು ಹಿಡಿಕೆಯಂತೆ ಅಂಟಿಸಿ. ಇದು ನೋಡಲು ಕಾಫಿಲೋಟದಂತೆ ಕಾಣುತ್ತದೆ. ಒಳಗೆ ಮಣ್ಣು ಹಾಕಿ, ಗಿಡ ಬೆಳೆದರೆ ತೋಟ ಆಕರ್ಷಕವಾಗಿ ಕಾಣುತ್ತದೆ.

* ಐದಾರು ಟೈರ್‌ಗಳನ್ನು ಅರ್ಧ ಚಂದ್ರಾಕಾರದಲ್ಲಿ ಕತ್ತರಿಸಿ ಸುತ್ತ ಜೋಡಿಸಿ. ಮಧ್ಯೆ ಮತ್ತೊಂದು ಟೈರ್‌ ಇರಿಸಿಲು ಜಾಗ ಬಿಟ್ಟು, ಸುತ್ತ ಮಣ್ಣು ಹಾಕಿ. ಕೊನೆಗೆ ಮಧ್ಯೆ ಇಟ್ಟ ಟೈರ್‌ ಒಳಗೂ ಮಣ್ಣು ತುಂಬಿ. ಸುತ್ತಲಿನ ಜಾಗದಲ್ಲಿ ಚಿಕ್ಕ ತಳಿಯ ಗಿಡ ನೆಟ್ಟು, ಮಧ್ಯೆ ದೊಡ್ಡ ತಳಿಯ ಗಿಡ ಬೆಳೆಯಿರಿ

* ಟೈರ್‌ಗಳಲ್ಲಿ ಆಕರ್ಷಕವಾಗಿ ಗಿಡಗಳನ್ನು ನೆಡುವುದು ನಿಮ್ಮ ಜಾಣ್ಮೆಗೆ ಬಿಟ್ಟಿದ್ದು. ಇದರಲ್ಲಿ ಬಗೆಬಗೆ ವಿನ್ಯಾಸ ಮಾಡಿ ಗಿಡಬೆಳೆಯುವುದು ಸಾಧ್ಯವಿದೆ. ಯುಟ್ಯೂಬ್‌ನಲ್ಲಿ ಸಾಕಷ್ಟು ವಿಡಿಯೊಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.