ADVERTISEMENT

ನವಿಲೇ ನವಿಲೇ...

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
ನವಿಲೇ ನವಿಲೇ...
ನವಿಲೇ ನವಿಲೇ...   
ಅದೃಷ್ಟ ಒಲಿಯುತ್ತದೆ, ಓದು ತಲೆ ಹತ್ತುತ್ತದೆ ಎಂಬ ಕಾರಣಕ್ಕೆ ಬಾಲ್ಯದಲ್ಲಿ ಪುಸ್ತಕದ ಮಧ್ಯೆ ಸ್ಥಾನ ಪಡೆದುಕೊಂಡಿದ್ದ ನವಿಲು ಗರಿಗೆ ವಾಸ್ತುವಿನ ಮಹತ್ವ ಕೂಡ ಇದೆ. ಮನೆಯ ಅಲಂಕಾರದಲ್ಲಿಯೂ ಪ್ರಮುಖ ಪಾತ್ರ ವಹಿಸುವ ನವಿಲು ಗರಿಯ ಕುರಿತು ಒಂದಿಷ್ಟು ಮಾಹಿತಿ... 
 
* ಲಾಕರ್‌ ಬಳಿ ನವಿಲುಗರಿಯನ್ನು ಇಡುವುದರಿಂದ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ. 
* ನವಿಲು ಗರಿಯನ್ನು ಮನೆಯಲ್ಲಿ ಇರಿಸುವುದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಸುಳಿಯುವುದಿಲ್ಲ. ಇದರಿಂದ ಮನೆಮಂದಿ ನೆಮ್ಮದಿಯಿಂದ ಇರಲು ನೆರವಾಗುತ್ತದೆ.
* ಮನೆಯ ದಕ್ಷಿಣ ಭಾಗದಲ್ಲಿ ನವಿಲುಗರಿಯನ್ನು ಇರಿಸುವುದರಿಂದ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳುವುದಿಲ್ಲ. 
* ನೃತ್ಯ ಮಾಡುವ ನವಿಲಿನ ಚಿತ್ರವನ್ನು ಲಿವಿಂಗ್‌ ರೂಮ್‌ನಲ್ಲಿ ಇರಿಸುವುದರಿಂದ ಕೋಣೆಯ ಅಂದ ಹೆಚ್ಚುತ್ತದೆ.
* ಕಚೇರಿ ಮತ್ತು ಮನೆಯಲ್ಲಿ ನವಿಲಿನ ಕಲಾತ್ಮಕ ವಸ್ತುಗಳನ್ನು ಇರಿಸಿಕೊಂಡರೆ ಒಳ್ಳೆಯದು.
* ಆಲಂಕಾರಿಕ ವಸ್ತುಗಳ ರೀತಿಯಲ್ಲಿ ನವಿಲುಗರಿಯನ್ನು ಮನೆಯಲ್ಲಿ ಇರಿಸಿದರೂ, ಅದರ ಮೇಲೆ ದೂಳು ಕೂರದಂತೆ ಎಚ್ಚರಿಕೆ ವಹಿಸಬೇಕು. 
* ಮಲಗುವ ಕೋಣೆಯ ಮುಖ್ಯದ್ವಾರದ ಲ್ಲಿ ನವಿಲಿನ ಚಿತ್ರವಿರಿಸುವುದರಿಂದ ದಂಪತಿಯ ನಡುವಿನ ಅನುಬಂಧ ಹೆಚ್ಚುತ್ತದೆ. 
(ಮೂಲ: ಗ್ಲೋಬಲ್‌ ವಾಸ್ತು.ಕಾಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.