ADVERTISEMENT

ಮನೆಯಲ್ಲಿ ಝೇಂಕರಿಸಲಿ ಶಂಖ ನಾದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2017, 19:30 IST
Last Updated 17 ಆಗಸ್ಟ್ 2017, 19:30 IST
ಮನೆಯಲ್ಲಿ ಝೇಂಕರಿಸಲಿ ಶಂಖ ನಾದ
ಮನೆಯಲ್ಲಿ ಝೇಂಕರಿಸಲಿ ಶಂಖ ನಾದ   

ಮನೆಯಲ್ಲಿ ಶಂಖ ಇದ್ದರೆ ಸುಖ, ಸಮೃದ್ಧಿ, ಸಂತೋಷ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಬಹುತೇಕ ಮನೆಯಲ್ಲಿ ಶಂಖ ಇದ್ದೇ ಇರುತ್ತದೆ. ಸಮುದ್ರದ ಯಾವುದಾದರೂ ಒಂದು ವಸ್ತು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ. ಶಂಖ ಮನೆಯಲ್ಲಿ ಇದ್ದರೆ ಯಾವ ಉಪಯೋಗಗಳಾಗುತ್ತವೆ ಎಂಬ ಮಾಹಿತಿ ಇಲ್ಲಿದೆ.

ಪೂಜೆ ಮಾಡುವ ಸಂದರ್ಭದಲ್ಲಿ ಶಂಖ ಊದುವುದರಿಂದ ಮನೆಗೆ ಒಳ್ಳೆಯದು. ಶಂಖ ಊದಿದಾಗ ಅದರಿಂದ ಓಂಕಾರ ನಾದ ಹೊಮ್ಮುತ್ತದೆ. ಈ ನಾದದ ತರಂಗಗಳು ಮನುಷ್ಯನ ಮೆದುಳಿಗೆ ಒಳ್ಳೆಯದು. ಹರಳಿನಿಂದ ಅಲಂಕಾರಗೊಂಡ ಶಂಖವನ್ನು ದೇವರ ಮನೆಯಲ್ಲಿ ಇಡುವುದು ಒಳ್ಳೆಯದು. ಇದು ಕೆಟ್ಟ ದೃಷ್ಟಿಯನ್ನು ಕಡಿಮೆ ಮಾಡುತ್ತವೆ ಎಂಬ ನಂಬಿಕೆ ಇದೆ.

ಬಾಲ ಗಣಪತಿ, ಲಕ್ಷ್ಮೀ ದೇವಿಯ ಬಲ ಭಾಗದಲ್ಲಿ ಶಂಖವನ್ನು ಇಟ್ಟರೆ ಒಳ್ಳೆಯದು. ಪೂಜೆ ಮಾಡುವಾಗ ಶಂಖದ ಬಾಯಿ ಮೇಲ್ಭಾಗಕ್ಕೆ ಇರಲಿ. ಜಲವನ್ನು ಪ್ರೋಕ್ಷಣೆ ಮಾಡಿ ಪೂಜೆ ಮಾಡಬೇಕು.

ADVERTISEMENT

ದಕ್ಷಿಣಾವರ್ತಿ (ಬಲಮುರಿ) ಶಂಖವನ್ನು ಕೆಂಪು ಬಟ್ಟೆಯ ಮೇಲೆ ಇಟ್ಟು, ಲಕ್ಷ್ಮೀ ದೇವಿ ಎದುರು ಇರಿಸಿ ಪೂಜೆ ಮಾಡುವುದರಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು. ಸಂಬಂಧದಲ್ಲಿ ಬಿರುಕು ಅಥವಾ ದಾಂಪತ್ಯದಲ್ಲಿ ಸದಾ ಕಲಹ ಇದ್ದರೆ ಸಂಬಂಧ ವೃದ್ಧಿಸಲು ಹೀರಾ ಶಂಖವಿಟ್ಟು ಪೂಜೆ ಮಾಡಿ. ಈ ಹೀರಾ ಶಂಖದಿಂದ ಶುಕ್ರ ಗ್ರಹದ ದೋಷ ನಿವಾರಣೆಯಾಗುತ್ತದೆ.

ವಿಷ್ಣು ಶಂಖ ಮನೆಯಲ್ಲಿ ಇಟ್ಟರೆ ಲಾಭದಾಯಕ. ಅರ್ಧ ಚಂದ್ರಾಕಾರದಲ್ಲಿರುವುದರಿಂದ ಇದನ್ನು ಚಂದ್ರ ಶಂಖವೆಂದೂ ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.