ADVERTISEMENT

ವಿದ್ಯುತ್‌ ಇಲ್ಲದೆಯೂ ತಂಪು ಗಾಳಿ

​ಪ್ರಜಾವಾಣಿ ವಾರ್ತೆ
Published 4 ಮೇ 2017, 19:30 IST
Last Updated 4 ಮೇ 2017, 19:30 IST
ವಿದ್ಯುತ್‌ ಇಲ್ಲದೆಯೂ ತಂಪು ಗಾಳಿ
ವಿದ್ಯುತ್‌ ಇಲ್ಲದೆಯೂ ತಂಪು ಗಾಳಿ   

ಈಗಂತೂ ವಿಪರೀತ ಸೆಖೆ. ಫ್ಯಾನ್‌ ಹಾಕಿದರೂ ಬಿಸಿ ಗಾಳಿ. ಅಬ್ಬಾ ಮನೆ ಒಳಗೆ ಕೂರುವುದೇ ಅಸಹನೀಯ ಎನಿಸುತ್ತದೆ. ಅದರಲ್ಲೂ ಕರೆಂಟ್‌ ಹೋದರಂತೂ ಕಥೆ ಮುಗಿದೇ ಹೋಯಿತು. ಆದರೆ ಇಂತಹ ಸಮಸ್ಯೆಗಳಿಗೆಲ್ಲ ಮುಕ್ತಿ ನೀಡಲು ವಿದ್ಯುತ್‌ ಬಳಕೆಯೇ ಇಲ್ಲದ ‘ಇಕೋ ಕೂಲರ್‌’ ಕಂಡುಹಿಡಿಯಲಾಗಿದೆ.

ಗ್ರೇ ಡಾಕಾ ಮತ್ತು ಗ್ರಾಮೀಣ ಇಂಟೆಲ್‌ ಸೋಶಿಯಲ್‌ ಬ್ಯುಸಿನೆಸ್‌ ಲಿಮಿಟೆಡ್‌ ಜಂಟಿಯಾಗಿ ಈ ಪ್ರಯೋಗಕ್ಕೆ ನಾಂದಿ ಹಾಡಿದೆ. ಈ ಕಂಪೆನಿಯವರು ಬಾಂಗ್ಲಾದೇಶದ 25,000 ಮನೆಗಳಲ್ಲಿ ಈ ‘ಇಕೋ ಕೂಲರ್‌’ ಅಳವಡಿಸಲು ನೆರವು ನೀಡಿದ್ದಾರೆ.

ಪ್ಲಾಸ್ಟಿಕ್‌ ಬಾಟಲಿಗಳಿಂದ ಈ ಕೂಲರ್‌ಗಳನ್ನು ತಯಾರಿಸಲಾಗಿದೆ. ಪ್ಲಾಸ್ಟಿಕ್‌ ಬಾಟಲಿಗಳನ್ನು ಸರಿಯಾಗಿ ಅರ್ಧಕ್ಕೆ ಕತ್ತರಿಸಿ, ಕಂಠದ ಅಳತೆಗೆ ಸರಿಯಾಗಿ ಮರದ ಬೋರ್ಡಿನಲ್ಲಿ ತೂತು ಮಾಡಲಾಗುತ್ತದೆ. ನಂತರ ಅರ್ಧ ಕತ್ತರಿಸಿದ ಬಾಟಲಿಯನ್ನು ಆ ತೂತಿಗೆ ಸಿಕ್ಕಿಸಲಾಗುತ್ತದೆ.

ADVERTISEMENT

ಈ ಬೋರ್ಡ್‌ಅನ್ನು ಮನೆಯ ಕಿಟಕಿಗೆ ಅಂಟಿಸಲಾಗುತ್ತದೆ.

ಹೊರಗಿನಿಂದ ಒಳಗೆ ಬರುವ ಗಾಳಿಯ ಉಷ್ಣತೆಯಲ್ಲಿ ವ್ಯತ್ಯಾಸವಾಗುತ್ತದೆ. ಗಾಳಿ ಕುಗ್ಗುವುದರಿಂದ ಒಳಗೆ ಬರುವ ಗಾಳಿ ತಂಪಾಗಿರುತ್ತದೆ. ಬಾಯಿ ತೆರೆದು ಉಸಿರು ಬಿಟ್ಟಾಗ ಬರುವ ಗಾಳಿಗೂ, ಬಾಯಿಯಿಂದ  ಉದಿದಾಗ ಬರುವ ಗಾಳಿಯ ಉಷ್ಣತೆಗೂ ವ್ಯತ್ಯಾಸವಿರುತ್ತದೆ. ಇದೇ ವಿಧಾನವನ್ನು ಇಲ್ಲಿಯೂ ಅಳವಡಿಸಲಾಗಿದೆ.

ಇದರಿಂದ ಗಾಳಿಯ ಉಷ್ಣತೆಯಲ್ಲಿ 5 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುತ್ತದೆ. ಈ ಉಪಕರಣ ತಯಾರಿ ತರಬೇತಿಯನ್ನು ಕಂಪೆನಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.