ADVERTISEMENT

ಹಸಿರಿನಿಂದ ಒಳಿತಾಗಲಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2017, 19:30 IST
Last Updated 3 ಆಗಸ್ಟ್ 2017, 19:30 IST
ಹಸಿರಿನಿಂದ ಒಳಿತಾಗಲಿ
ಹಸಿರಿನಿಂದ ಒಳಿತಾಗಲಿ   

ಮನೆಯೊಳಗೆ ಗಾಳಿ ಬೆಳಕು ಚೆನ್ನಾಗಿ ಬಂದು ಆರೋಗ್ಯವಾಗಿ ಇದ್ದರೆ ಅದೇ ವಾಸ್ತು ಎಂದು ನಂಬಿದ್ದರು ನಮ್ಮ ಹಿರಿಯರು. ಅದಕ್ಕೆ ಪೂರಕವಾಗಿ ಮನೆಯ ಹಿತ್ತಿಲಲ್ಲಿ, ಮನೆಯ ಮುಂದೆ ಗಿಡಗಳನ್ನು ಬೆಳೆಸುತ್ತಿದ್ದರು.

ಇಂದು ಬಾಡಿಗೆ ಮನೆ, ಸ್ಥಳಾವಕಾಶದ ಕೊರೆತೆಯಿಂದಾಗಿ ಕಿಟಕಿ ಬಾಗಿಲುಗಳು ದೊಡ್ಡದಿದ್ದರೆ ಅದೇ ಪುಣ್ಯ ಎನ್ನುವಂತಾಗಿದೆ. ಕೆಲ ಗಿಡಗಳನ್ನು ಮನೆಯೊಳಗೋ, ಕಿಟಕಿಯ ಹೊರಭಾಗದಲ್ಲೋ ಬೆಳೆಸಿದರೆ ವಾಸ್ತುಗೆ ಪೂರಕ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆ ಗಿಡಗಳ ಮಾಹಿತಿ ಇಲ್ಲಿದೆ.

ತುಳಸಿ: ಸಾಧಾರಣವಾಗಿ ತುಳಸಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಕುಡಿಯುವ ನೀರಿನಲ್ಲಿ ಒಂದಿಷ್ಟು ತುಳಸಿ ಎಲೆ ಹಾಕಿ ಒಂದು ರಾತ್ರಿ ಹಾಗೆ ಬಿಟ್ಟು ನಂತರ ಆ ನೀರನ್ನು ಬಳಕೆ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಐದಾರು ತುಳಸಿ ಗಿಡಗಳಿದ್ದರೆ ವಾತಾವರಣ ಶುದ್ಧವಾಗಿರುತ್ತದೆ. ಆಯುರ್ವೇದದಲ್ಲಿ ಔಷಧಿಯ ತಾಯಿ ಎದು ತುಳಸಿಯನ್ನು ಕರೆಯುತ್ತಾರೆ. ಇಂಥ ಅಮೂಲ್ಯ ಗಿಡ ಇದ್ದರೆ ಆರೋಗ್ಯವೃದ್ಧಿಯಾಗುತ್ತದೆ.

ADVERTISEMENT

ಮಲ್ಲಿಗೆ: ಕೈತೋಟದಲ್ಲಿ ಬೆಳದಿಂಗಳು ಸೂಸುವ ಚಂದಿರ ಮಲ್ಲಿಗೆ. ಸಸ್ಯ ವಾಸ್ತುವಿನಲ್ಲೂ ಇದಕ್ಕೆ ಪ್ರಮುಖ ಸ್ಥಾನವಿದೆ. ಮನೆಯ ಮುಂಭಾಗದಲ್ಲಿ ಮಲ್ಲಿಗೆ ಗಿಡವಿದ್ದರೆ ಮನೆಗೆ ಶೋಭೆ. ಈ ಗಿಡದಿಂದ ಅದೃಷ್ಟ, ಸಂಪತ್ತು ಮನೆ ತುಂಬುತ್ತದೆ ಎಂಬ ನಂಬಿಕೆ ಇದೆ. ಮಲ್ಲಿಗೆ ಹೂವಿನಲ್ಲಿ ಔಷಧೀಯ ಗುಣವಿದ್ದು, ಇದರ ಪರಿಮಳದಿಂದ ಮನಸ್ಸು ಅಹ್ಲಾದಕರವಾಗಿರುತ್ತದೆ. ಈಗ ಮನೆ ಒಳಗೂ ಇಟ್ಟುಕೊಳ್ಳಬಹುದಾದ ಬೋನ್ಸಾಯ್‌ ಮಲ್ಲಿಗೆ ಗಿಡಗಳು ಲಭ್ಯ.

ಲಿಲ್ಲಿ: ಮನೆಯೊಳಗೆ ಇಟ್ಟುಕೊಳ್ಳಬಹುದಾದ ಗಿಡಗಳಲ್ಲಿ ಲಿಲ್ಲಿ ಉತ್ತಮ ಗಿಡ. ನಾಸಾ ಬಿಡುಗಡೆ ಮಾಡಿರುವ ‘ವಾತಾವರಣ ಶುದ್ಧಿ ಮಾಡುವ ಗಿಡಗಳ ಪಟ್ಟಿ’ಯಲ್ಲಿ ಲಿಲ್ಲಿಯೂ ಒಂದು. ಹಾಗೆಯೇ ಚೀನಿ ವಾಸ್ತು ಶಾಸ್ತ್ರದ ಪ್ರಕಾರ ಲಿಲ್ಲಿಯನ್ನು ಮನೆಯೊಳಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಜಗಳ, ಕೋಪ, ಗಲಾಟೆ ಇರುವುದಿಲ್ಲವಂತೆ. ಹಾಗೇ ಲಿಲ್ಲಿ ಗಿಡಗಳಿಗೆ ಚಂದ್ರನ ಬೆಳಕು ಇಷ್ಟಂತೆ.

ರಾತ್ರಿ ಹೊತ್ತು ಬಾಲ್ಕನಿಯಲ್ಲಿ ಗಿಡವಿಟ್ಟು ಬೆಳದಿಂಗಳಲ್ಲಿ ಮಿಂದೆದ್ದ ಗಿಡವನ್ನು ಬೆಳಿಗ್ಗೆ ಮನೆಯೊಳಗೆ ಇಟ್ಟುಕೊಂಡರೆ. ಚಂದ್ರನ ಪ್ರಶಾಂತತೆ ಮನೆಯೊಳಗೂ ನೆಲೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.