ADVERTISEMENT

ಹೀಗಿರಲಿ ಮಲಗುವ ಕೋಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 19:30 IST
Last Updated 13 ಏಪ್ರಿಲ್ 2017, 19:30 IST
ಹೀಗಿರಲಿ ಮಲಗುವ ಕೋಣೆ
ಹೀಗಿರಲಿ ಮಲಗುವ ಕೋಣೆ   

ಬೆಡ್‌ರೂಂ ದೈಹಿಕ ಮತ್ತು ಮಾನಸಿಕವಾಗಿ ವಿರಮಿಸುವ ಸ್ಥಳ. ಸುಖನಿದ್ರೆ ಮಾಡಿದರೆ ಮಾತ್ರವೇ ಮರುದಿನ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಸಂಬಂಧಗಳ ನಡುವೆ ಶಾಂತಿ ಮತ್ತು ಸಾಮರಸ್ಯ ಇರಬೇಕಾದರೆ ಬೆಡ್‌ರೂಂ ವಾಸ್ತು ಹೇಗಿರಬೇಕು ಎಂಬುದರ ಮಾಹಿತಿ ಇಲ್ಲಿದೆ.

* ಬೆಡ್‌ರೂಂ ಆಯತ ಅಥವಾ ಚೌಕ ಆಕಾರದಲ್ಲಿರಬೇಕು. ಆಯತಾಕಾರವಿದ್ದಾಗ 20 ಅಡಿ ಉದ್ದ, 10 ರಿಂದ 40 ಅಡಿ ಅಗಲವಿರಬೇಕು.

* ಮಲಗುವ ಕೋಣೆ ಮನೆಯ ನೈರುತ್ಯ ಭಾಗದಲ್ಲಿ ಇರಬೇಕು.

ADVERTISEMENT

* ಮಾಸ್ಟರ್‌ ಬೆಡ್‌ರೂಂ ಮನೆಯ ಉಳಿದ ಕೋಣೆಗಳಿಗಿಂತ ದೊಡ್ಡದಾಗಿರಬೇಕು.

* ಮನೆಯ ಮಧ್ಯಭಾಗದಲ್ಲಿ ಮಲಗುವ ಕೋಣೆ ಇರಬಾರದು.

* ಪ್ರಾಣಿಗಳ ಚಿತ್ರ, ಬೆಂಕಿಯ ದೃಶ್ಯ, ಹೂವು ಮತ್ತು ಹಣ್ಣುಗಳಿಲ್ಲದ ಮರ, ಪಾರಿವಾಳ, ಕಾಗೆ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬಾರದು.

* ಉತ್ತರದ ದಿಕ್ಕಿಗೆ ತಲೆ ಹಾಕುವುದು ಬೇಡ ಎಂದು ಗಣಪನ ಕಥೆಯೇ ಹೇಳುತ್ತದೆ. ಹಾಗಾಗಿ ನೆಮ್ಮದಿಯ ನಿದ್ದೆಗೆ ದಕ್ಷಿಣ ದಿಕ್ಕು ಸೂಕ್ತ. ಪೂರ್ವ ದಿಕ್ಕು ಕೂಡ ಒಳ್ಳೆಯದು.

* ಮಲಗುವ ಕೋಣೆಯಲ್ಲಿ ಅಕ್ವೇರಿಯಂ ಇಲ್ಲದಿರುವುದೇ ಒಳ್ಳೆಯದು. ಈಜುವ ಮೀನುಗಳನ್ನು ನೋಡುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂಬುದು ನಿಜ ಆದರೂ, ಅದನ್ನು ಬೆಡ್‌ರೂಮ್‌ನಲ್ಲಿ ಇರಿಸುವುದರಿಂದ ದಂಪತಿಯ ನಡುವೆ ವಿರಸ ಮೂಡಬಹುದು.

* ಮಲಗುವ ದಿಕ್ಕಿಗೆ ನೇರವಾಗಿ ಕನ್ನಡಿಯನ್ನು ಇರಿಸಬಾರದು. ಒಂದು ವೇಳೆ ಇರಿಸಿದ್ದರೂ, ಅದನ್ನು ಬಟ್ಟೆಯಿಂದ ಮುಚ್ಚಿಡಿ. ಇಲ್ಲದಿದ್ದರೆ ಕೆಟ್ಟ ಕನಸುಗಳು ಬೀಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.