ADVERTISEMENT

'ಬ್ಯಾಂಗ್ ಬ್ಯಾಂಗ್' ನಿಂದ ಕೇಳಿ ಬಂದ 'KNOCK KNOCK' ಸದ್ದಿಗೆ 'ಕುಮ್ಕಿ'ಯೇರಿ ಘಾಟಿಯ ಇಳಿದು ಬಂದರು!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 12:36 IST
Last Updated 28 ಏಪ್ರಿಲ್ 2017, 12:36 IST
'ಬ್ಯಾಂಗ್ ಬ್ಯಾಂಗ್' ನಿಂದ ಕೇಳಿ ಬಂದ 'KNOCK KNOCK' ಸದ್ದಿಗೆ 'ಕುಮ್ಕಿ'ಯೇರಿ ಘಾಟಿಯ ಇಳಿದು ಬಂದರು!
'ಬ್ಯಾಂಗ್ ಬ್ಯಾಂಗ್' ನಿಂದ ಕೇಳಿ ಬಂದ 'KNOCK KNOCK' ಸದ್ದಿಗೆ 'ಕುಮ್ಕಿ'ಯೇರಿ ಘಾಟಿಯ ಇಳಿದು ಬಂದರು!   

ಕನ್ನಡ ಸಿನಿಮಾ ಲೋಕಕ್ಕೆ ತೀರಾ ಅಪರಿಚಿತವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸುಪಾಸಿನ ಜಗತ್ತನ್ನು ಭಿನ್ನವಾಗಿ ಕಟ್ಟಿಕೊಟ್ಟ ಚಿತ್ರ ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ'. 

2014ರಲ್ಲಿ ತೆರಕಂಡ ಈ ಚಿತ್ರದ ನಿರ್ದೇಶನಕ್ಕಾಗಿ ರಕ್ಷಿತ್ ಶೆಟ್ಟಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿತ್ತು. ಚಿತ್ರದ ಸಂಗೀತ ನಿರ್ದೇಶನಕ್ಕೆ ಬಿ.ಅಜನೀಶ್ ಲೋಕನಾಥ್ ಕೂಡಾ ಪ್ರಶಸ್ತಿ ಗೆದ್ದಿದ್ದರು.

ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ₹2 ಕೋಟಿ ಗಳಿಕೆ ಮಾಡಿದ ಈ ಚಿತ್ರದ ಹಾಡುಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ADVERTISEMENT

ಚಿತ್ರದಲ್ಲಿ KNOCK KNOCK ಎಂಬ ಹಾಡೊಂದಿದೆ. ಈ ಹಾಡು ಅವರ ನಾನ್ಸಿ ಸಿನಾತ್ರಾ ಅವರ ಬ್ಯಾಂಗ್ ಬ್ಯಾಂಗ್  ಹಾಡನ್ನು ಹೋಲುತ್ತದೆ.

ಚಿತ್ರ: ಉಳಿದವರು ಕಂಡಂತೆ
ಹಾಡು: KNOCK KNOCK
ಗಾಯಕರು: ಸಿ. ಆರ್. ಬಾಬ್ಬಿ
ಸಂಗೀತ ನಿರ್ದೇಶನ: ಅಜನೀಶ್ ಲೋಕನಾಥ್

ಸಾಮ್ಯತೆ
ಹಾಡು: ಬ್ಯಾಂಗ್ ಬ್ಯಾಂಗ್
ಗಾಯಕರು: ನಾನ್ಸಿ ಸಿನಾತ್ರಾ

ಇದಲ್ಲದೆ 'ಘಾಟಿಯಾ ಇಳಿದು ತೆಂಕಣ ಬಂದು ಅವಳ ನೋಡಿ ನಿಂತನು' ಎಂಬ ಹಾಡಿಗೆ ತಮಿಳಿನ ಕುಮ್ಕಿ ಚಿತ್ರದ 'ಅಯ್ಯಯ್ಯಯ್ಯೋ ಆನಂದಮೇ' ಎಂಬ ಹಾಡಿಗೂ ಸಾಮ್ಯತೆ ಇದೆ.

ಹಾಡು: ಘಾಟಿಯಾ ಇಳಿದು
ಗಾಯಕರು: ವಿಜಯ್ ಪ್ರಕಾಶ್


ಚಿತ್ರ: ಕುಮ್ಕಿ
ಹಾಡು: ಅಯ್ಯಯ್ಯಯ್ಯೋ ಆನಂದಮೇ
ಗಾಯಕರು: ಹರಿ ಚರಣ್
ಸಂಗೀತ ನಿರ್ದೇಶನ: ಡಿ.ಇಮ್ಮನ್

[related]

ಪರಭಾಷೆಯ ಹಾಡುಗಳೊಂದಿಗೆ ಸಾಮ್ಯತೆ ಇರುವ, ಅಲ್ಲಿಂದ ಸ್ಪೂರ್ತಿ ಪಡೆದು ಹುಟ್ಟಿಕೊಂಡ ಕನ್ನಡ ಹಾಡುಗಳನ್ನು 'ಸ್ಫೂರ್ತಿ ಸೆಲೆ' ಸರಣಿ ಲೇಖನಗಳ ಮೂಲಕ ನಾವು ಪರಿಚಯಿಸುತ್ತಿದ್ದೇವೆ. ಬೇರೆ ಭಾಷೆಯಿಂದ ಸ್ಫೂರ್ತಿ ಪಡೆದ ಕನ್ನಡ ಚಿತ್ರಗೀತೆಗಳು ನಿಮ್ಮ ಗಮನಕ್ಕೆ ಬಂದರೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.