ADVERTISEMENT

ಇಬ್ಬಗೆ ನೀತಿ ಕಾರಣ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬುರ್ಖಾ ಧರಿಸಿ ಬರುತ್ತಿರುವುದರ ವಿರುದ್ಧ ನಡೆಯುತ್ತಿರುವ ಆಂದೋಲನ ತಪ್ಪು ಎಂದು ಹುಳಿಯಾರ್‌ ಅವರು ಹೇಳಿರುವುದನ್ನು ಒಪ್ಪಬಹುದು.
 
ಆದರೆ ಅನೇಕ ವರ್ಷಗಳಿಂದ, ಕ್ರೈಸ್ತರ ಆಡಳಿತವಿರುವ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಣೆಗೆ ಕುಂಕುಮ ಹಚ್ಚಿಕೊಂಡು ಅಥವಾ ಹೂ ಮುಡಿದುಕೊಂಡು ಬಂದರೆ ಅವರಿಗೆ ₹ 400–500 ದಂಡ ವಿಧಿಸುವ ವಿದ್ಯಮಾನ ನಡೆದುಕೊಂಡು ಬಂದಿದೆ. ಇದರ ವಿರುದ್ಧ ಪೋಷಕರು ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ತಾಣಗಳಲ್ಲಿ ತಮ್ಮ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಅವರಿಗೆ ಪ್ರಗತಿಪರರಿಂದ ಎಂದೂ ಬೆಂಬಲ ಸಿಕ್ಕಿಲ್ಲ.
 
ಅಷ್ಟೇ ಅಲ್ಲ, ಪ್ರಗತಿಪರ ಲೇಖಕಿ ಸಾರಾ ಅಬೂಬಕ್ಕರ್‌ ಅವರು, ಆ ಶಾಲೆಗಳ ಈ ನಡೆ ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆಯನ್ನು ತೊಡೆದು ಸಮಾನತೆಯನ್ನು ಬೆಳೆಸುತ್ತದೆ ಎಂದು ವಿವರಿಸಿ ಬೆಂಬಲಿಸಿರುವುದನ್ನು ನಾನು ಓದಿದ್ದೇನೆ.
 
ಎಪ್ಪತ್ತು–ಎಂಬತ್ತರ ದಶಕಗಳಲ್ಲಿ ವಿದ್ಯಾರ್ಥಿಗಳು ಪ್ರಗತಿಪರ ಸಾಹಿತಿಗಳನ್ನೂ ಅಧ್ಯಾಪಕರನ್ನೂ ಅನುಸರಿಸುತ್ತಿದ್ದರು, ಈಗಿನ ವಿದ್ಯಾರ್ಥಿಗಳಲ್ಲಿ ಅಂತಹ ಅನುಸರಣೆ ಇಲ್ಲಾವಾಗಿದೆ ಎಂದು ಹುಳಿಯಾರ್‌ ತಮ್ಮ ಬರಹದಲ್ಲಿ ಮತ್ತೆ ಮತ್ತೆ ಹೇಳಿದ್ದಾರೆ. ಇಂತಹ ಬೆಳವಣಿಗೆಗೆ ನಮ್ಮ ಪ್ರಗತಿಪರರ ಇಬ್ಬಗೆಯ ನೀತಿ ಎಷ್ಟು ಕಾರಣ ಎಂಬುದರ ಬಗ್ಗೆ ಅವರು ಯೋಚಿಸಿದಂತೆ ಕಾಣುವುದಿಲ್ಲ.
-ಗಿರೀಶ್‌ ವಿ. ವಾಘ್‌, ಬೆಂಗಳೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.