ADVERTISEMENT

ಗುರುವಾರ, 13–4–1967

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 19:30 IST
Last Updated 12 ಏಪ್ರಿಲ್ 2017, 19:30 IST
ಅಮೆರಿಕದಲ್ಲಿ ಫಿಜೊ: ವಿಶ್ವಸಂಸ್ಥೆ ಮುಂದೆ ನಾಗಾ ಪ್ರಶ್ನೆ ಪ್ರಸ್ತಾಪಕ್ಕೆ ಪ್ರಯತ್ನ
ನವದೆಹಲಿ, ಏ. 12– ನಾಗಾ ರಾಜ್ಯ ಸಮಸ್ಯೆಯನ್ನು ವಸಾಹತುಶಾಹಿಗೆ ಸಂಬಂಧಿಸಿದ ವಿಶ್ವರಾಷ್ಟ್ರ ಸಂಸ್ಥೆಯ ಸಮಿತಿಯ ಮುಂದೆ ಪ್ರಸ್ತಾಪಿಸಲು ನಾಗಾ ದಂಗೆಕೋರರ ನಾಯಕ ಫಿಜೊರವರು ಆಲೋಚಿಸುತ್ತಿದ್ದಾರೆಂದು ಇಲ್ಲಿನ ಅಧಿಕೃತ ವಲಯಗಳಿಂದ ತಿಳಿದುಬಂದಿದೆ.
 
ಚಿಕಿತ್ಸೆಗಾಗಿ ಹೋಗುತ್ತಿರುವುದಾಗಿ ತಮ್ಮ ಅಮೆರಿಕ ಭೇಟಿಗೆ ಫಿಜೊರವರು ಕಾರಣ ನೀಡಿದ್ದರಾದರೂ ವಿಶ್ವರಾಷ್ಟ್ರ ಸಂಸ್ಥೆಯ ಮುಂದೆ ನಾಗಾ ನಾಡಿನ ಸಮಸ್ಯೆಯನ್ನು ಪ್ರಸ್ತಾಪಿಸುವುದಕ್ಕಾಗಿ ಬೆಂಬಲ ಗಳಿಸುವುದೇ ಅವರ ಈ ಭೇಟಿಯ ಮುಖ್ಯ ಉದ್ದೇಶವೆಂದು ಹೇಳಲಾಗಿದೆ.
 
ಬಟ್ಟೆಗಳ ಬೆಲೆ ಶೇ 5ರಷ್ಟು ಏರುವ ಸಂಭವ
ನವದೆಹಲಿ, ಏ. 12– ಬಟ್ಟೆಗಳ ಬೆಲೆಗಳನ್ನು ಏರಿಸಲಾಗುವುದೆಂದು ಕೇಂದ್ರ ವಾಣಿಜ್ಯ ಸಚಿವ ಶ್ರೀ ದಿನೇಶ್‌ಸಿಂಗರು ಇಂದು ಇಲ್ಲಿ ಸೂಚಿಸಿದರು. ಆದರೆ ಬೆಲೆಗಳ ಏರಿಕೆಯ ಪ್ರಮಾಣವನ್ನು ಸೂಚಿಸಲು ನಿರಾಕರಿಸಿದರು.
 
ಸದ್ಯದಲ್ಲಿ ಹತ್ತಿಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕುವುದಿಲ್ಲವೆಂದೂ, ಹತ್ತಿಯ ಬೆಲೆ ಏರಿಕೆಗೆ ಅವಕಾಶ ನೀಡುವುದಿಲ್ಲವೆಂದು, ಬಟ್ಟೆಯ ಮೇಲಿನ ಎಕ್ಸೈಸ್ ಸುಂಕವನ್ನು  ಸದ್ಯಕ್ಕೆ ಕಡಿಮೆ ಮಾಡುವುದಿಲ್ಲವೆಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.