ADVERTISEMENT

ಗುರುವಾರ 27, ಜುಲೈ 2017

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ವಾರ್ಷಿಕ ಯೋಜನೆ ಘೋಷಣೆ: ಕೃಷಿಗೆ ಗರಿಷ್ಠ ಆದ್ಯತೆ

ನವದೆಹಲಿ, ಜುಲೈ 26– ಯೋಜನಾ ಸಚಿವ ಶ್ರೀ ಅಶೋಕ ಮೆಹತಾ ಅವರು ಇಂದು ಸಂಸತ್ತಿನಲ್ಲಿ 1967–68ನೇ ಸಾಲಿನ ವಾರ್ಷಿಕ ಯೋಜನೆಯನ್ನು ಘೋಷಿಸಿದ್ದು, ಕೃಷಿಗೆ ಗರಿಷ್ಠ ಆದ್ಯತೆ ನೀಡಲಾಗಿದೆ.

ಒಟ್ಟಾರೆ 2,246 ಕೋಟಿ ರೂಪಾಯಿಗಳ ಯೋಜನೆಯನ್ನು ಘೋಷಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು 25 ಕೋಟಿ ರೂಪಾಯಿ ಹೆಚ್ಚು. ಉತ್ಪಾದನೆಯಲ್ಲಿ ಶೇ 12ರಷ್ಟು ಏರಿಕೆ ಹಾಗೂ ಶೇ 8ರಷ್ಟು ಬೆಲೆ ಏರಿಕೆ ಆಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ರಾಷ್ಟ್ರದ ವಾರ್ಷಿಕ ಆದಾಯದಲ್ಲಿ ಶೇ 20ರಷ್ಟು ಏರಿಕೆ ನಿರೀಕ್ಷಿಸಲಾಗಿದೆ.

ADVERTISEMENT

ಒಟ್ಟಾರೆ ಯೋಜನಾ ವೆಚ್ಚದ ಸುಮಾರು ನಾಲ್ಕನೇ ಒಂದರಷ್ಟು (ರೂ 523 ಕೋಟಿ) ಹಣವನ್ನು ಕೃಷಿ, ನೀರಾವರಿ ಹಾಗೂ ಸಮುದಾಯ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ.

ಖಾದಿ ಮಂಡಳಿ ಅಧ್ಯಕ್ಷರಿಗೆ ಕ್ಲೀನ್‌ ಚಿಟ್‌: ವಿಧಾನಸಭೆಯಲ್ಲಿ ಗದ್ದಲ

ಬೆಂಗಳೂರು, ಜುಲೈ 26– ಖಾದಿ ಮಂಡಳಿಯ ಹಿಂದಿನ ಮೂವರು ಅಧ್ಯಕ್ಷರುಗಳಿಗೆ ಇಂದು ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು ಕ್ಲೀನ್‌ಚಿಟ್‌ ನೀಡಿದ್ದು ವಿಧಾನಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು.

ಬಜೆಟ್‌ ಕೊರತೆ ಆಗದು: ಸಚಿವ

ನವದೆಹಲಿ, ಜುಲೈ 26– ‘ಈ ವರ್ಷಾಂತ್ಯದ ವೇಳೆಗೆ ಬಜೆಟ್‌ ಕೊರತೆಯನ್ನು ತುಂಬಿಕೊಳ್ಳುವ ವಿಶ್ವಾಸವಿದೆ’ ಎಂದು ಉಪ ಪ್ರಧಾನಿ ಮೊರಾರ್ಜಿ ದೇಸಾಯಿ ಲೋಕಸಭೆಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.