ADVERTISEMENT

ಬದಲಾವಣೆಗೆ ತೆರೆದುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 19:30 IST
Last Updated 12 ಮಾರ್ಚ್ 2017, 19:30 IST

ಹಿಂದೂ ಧಾರ್ಮಿಕ ಭಕ್ತಿಗೀತೆ ಹಾಡಿದಳೆಂಬ ಕಾರಣಕ್ಕೆ ಮುಸ್ಲಿಂ ಧರ್ಮದ ಕೆಲವು ಮೂಲಭೂತವಾದಿಗಳು ಯುವತಿ ಸುಹಾನಾ ಸೈಯದ್ ವಿರುದ್ಧ ಹರಿಹಾಯ್ದಿರುವುದು  ಸರಿಯಲ್ಲ. ವಿಶಾಲವಾಗಿ ನೋಡಿದರೆ ಎಲ್ಲ ಧರ್ಮಗಳೂ ಮಾನವ ನಿರ್ಮಿತ. ಭಕ್ತಿಭಾವವೂ ಅಷ್ಟೆ.

ನಿಜವಾದ ಮನುಷ್ಯ ಧರ್ಮವೆಂದರೆ ಮಾನವ ಪ್ರೀತಿ ಮತ್ತು ಭ್ರಾತೃತ್ವ. ಬದಲಾದ ಕಾಲಕ್ಕೆ ತಕ್ಕಂತೆ ಮುಸ್ಲಿಂ ಧಾರ್ಮಿಕವಾದಿಗಳು ವಿಶಾಲವಾಗಿ ತೆರೆದುಕೊಳ್ಳುತ್ತ ಮುಸ್ಲಿಂ ಶ್ರೀಸಾಮಾನ್ಯರ ನೈಜ ಏಳ್ಗೆಗಾಗಿ ಪ್ರಯತ್ನಿಸಲಿ.

ಸುಹಾನಾ ಹಾಡುಗಾರಿಕೆ ಇಸ್ಲಾಂ ಮೂಲಕ್ಕೆ ಕುಂದನ್ನೇನೂ ಉಂಟುಮಾಡದು. ಮುಸ್ಲಿಮರು ಸೇರಿದಂತೆ ನಾವೆಲ್ಲರೂ ಆಕೆಯ ಬೆಂಬಲಕ್ಕೆ, ಉತ್ತಮ ಭವಿಷ್ಯಕ್ಕೆ ಪೂರಕವಾಗಿ ನಿಲ್ಲೋಣ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಜಾತ್ಯತೀತ ಹಾಗೂ ಧರ್ಮನಿರಪೇಕ್ಷ ಗುಣವುಳ್ಳವರು ಎಂಬುದನ್ನು ಸಾಬೀತುಪಡಿಸೋಣ.
-ಹೊರೆಯಾಲ ದೊರೆಸ್ವಾಮಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.