ADVERTISEMENT

ಬುಧವಾರ, 28–12–1966

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2016, 19:30 IST
Last Updated 27 ಡಿಸೆಂಬರ್ 2016, 19:30 IST

ಹೆಚ್ಚು ಸ್ವಯಮಧಿಕಾರ ಸಿಗುವಂತೆ ಆಡಳಿತ ಪುನರ್‌ ವ್ಯವಸ್ಥೆಗೆ ಸಿದ್ಧ: ಇಂದಿರಾ
ಷಿಲ್ಲಾಂಗ್‌, ಡಿ. 27–
ತಾಳ್ಮೆಯಿಂದ ಇರಬೇಕೆಂದು ಅಸ್ಸಾಂನ ಗಿರಿಜನ ನಾಯಕ ರಿಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಯವರು ಇಂದು ಇಲ್ಲಿ ಮನವಿ ಮಾಡಿ ಕೊಂಡರಲ್ಲದೆ ಗಿರಿಜನರು ಹೆಚ್ಚಿನ ಸ್ವಯಮಧಿಕಾರವನ್ನು ನಿರ್ವಹಿಸಲು ಸಾಧ್ಯವಾಗುವಂತೆ ಆಡಳಿತವನ್ನು ಪುನರ್‌ ವ್ಯವಸ್ಥೆ ಮಾಡಲು ಸರ್ಕಾರವು ಸಿದ್ಧವಾಗಿದೆ ಯೆಂದೂ ಭರವಸೆ ನೀಡಿದರು.

***
ವಾಸ್ತವಿಕವಾಗಿ ಗೋಹತ್ಯೆ ಪ್ರಶ್ನೆ ಪರಿಶೀಲಿಸಲು ಗೊಲ್ವಾಲ್‌ಕರ್‌ ಒತ್ತಾಯ
ನವದೆಹಲಿ, ಡಿ. 27–
ಗೋಹತ್ಯೆ ನಿಷೇಧ ಪ್ರಶ್ನೆಯನ್ನು ವಾಸ್ತವಿಕವಾಗಿ ಪರಿಶೀಲಿಸಬೇಕಲ್ಲದೆ ಪುರಿಯ ಜಗದ್ಗುರುಗಳು ಮತ್ತು ಸಂತ ಪ್ರಭುದತ್ತ ಬ್ರಹ್ಮಚಾರಿ ಅವರ ಜೀವ ಗಳನ್ನು ಉಳಿಸಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಶ್ರೀ ಎಂ.ಎಸ್‌. ಗೊಲ್ವಾಲ್‌ಕರ್‌ ಅವರು ಸೋಮ ವಾರ ಹೇಳಿಕೆಯೊಂದನ್ನು ನೀಡಿ ಕೇಂದ್ರ ಗೃಹಮಂತ್ರಿ ಶ್ರೀ ಚವಾಣ್‌ ಅವರನ್ನು ಒತ್ತಾಯಪಡಿಸಿದ್ದಾರೆ.

***
ಶೀಘ್ರದಲ್ಲೇ ಹರಿಯಾನ, ಪಂಜಾಬ್‌, ಹಿಮಾಚಲದ ಮುಖ್ಯಮಂತ್ರಿಗಳ ಸಭೆ
ನವದೆಹಲಿ, ಡಿ. 27–
ಪಂಜಾಬ್‌, ಹರಿಯಾನ ಮತ್ತು ಹಿಮಾಚಲ ಪ್ರದೇಶ ದಲ್ಲಿರುವ ವಿವಾದಕ್ಕೊಳಗಾದ ಪ್ರದೇಶಗಳ ವಿಷಯ ಪರಿಶೀಲಿಸುವುದಕ್ಕಾಗಿ ಸಮಿತಿ ಅಥವ ಆಯೋಗ ನೇಮಕ ಮಾಡುವ ಪ್ರಶ್ನೆ ಚರ್ಚಿಸಲು ಕೇಂದ್ರ ಸರ್ಕಾರ  ಕೂಡಲೇ ಈ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಿದೆ. ಪಂಜಾಬಿನ ಮರುವಿಂಗಡಣೆಗೆ ಸಂಬಂಧಿಸಿದ ವಿವಾದದ ಬಗೆಗೆ ಕೈಗೊಳ್ಳ ಬೇಕೆಂದು ಸೂಚಿಸಿರುವ ಕ್ರಮಕ್ಕೆ ಮುಖ್ಯ ಮಂತ್ರಿಗಳ ನಡುವೆ ಏರ್ಪಟ್ಟಿರುವ  ಒಡಂ ಬಡಿಕೆ ಆಧಾರವೆಂದು ಅಧಿಕೃತ ವಕ್ತಾರರೊಬ್ಬರು ಇಲ್ಲಿ ಇಂದು ತಿಳಿಸಿದರು.

***
ಗೋಹತ್ಯೆ ನಿಷೇಧದ ಬಗ್ಗೆ ಸಮಿತಿ ರಚನೆಗೆ ದ್ವಾರಕಾ ಶ್ರೀಗಳ ಒತ್ತಾಯ
ವಿರಾಮಗಾಯ್‌, ಡಿ. 27– 
ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿ ಸುವ ಬಗ್ಗೆ ಪರಿಶೀಲಿಸಲು ಸಮಿತಿ ಯೊಂದನ್ನು ನೇಮಿಸಿ, ಪುರಿ ಜಗದ್ಗುರು ಶಂಕರಾಚಾರ್‍ಯರ ಹಾಗೂ ಉಪವಾಸ ಮಾಡುತ್ತಿರುವ ಇತರ ಸಾಧುಗಳ ಅಮೂಲ್ಯ ಪ್ರಾಣಗಳನ್ನು ಉಳಿಸಬೇಕೆಂದು ದ್ವಾರಕಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್‍ಯರು ಇಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ರಾಷ್ಟ್ರಪತಿ, ಪ್ರಧಾನಿ ಮತ್ತು ಗೃಹ ಸಚಿವರಿಗೆ ತಂತಿ ಕೊಟ್ಟಿದ್ದಾರೆ.

***
ಲೂನಾದ ‘ಯಾಂತ್ರಿಕ ಕೈನಿಂದ’ ಚಂದ್ರನ ಮೇಲ್ಮೈ ಪರಿಶೀಲನೆ
ಲಂಡನ್‌, ಡಿ. 27–
ಚಂದ್ರನ ಮೇಲ್ಮೈಯ ಸಾಂದ್ರತೆ ಮತ್ತು ದೃಢತೆಯನ್ನು ಪರೀಕ್ಷಿಸಲು ರಷ್ಯದ ಅಂತರಿಕ್ಷ ನೌಕೆ ಲೂನಾ–13, ‘ಯಾಂತ್ರಿಕ ಕೈ’ ಬಳಸುತ್ತಿದೆಯೆಂದು ರಷ್ಯ ವಾರ್ತಾ ಸಂಸ್ಥೆ ತಾಸ್‌ ಈ ರಾತ್ರಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.