ADVERTISEMENT

ಬುಧವಾರ, 8–2–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ಪಂಚವಾರ್ಷಿಕ ಯೋಜನೆ ಎಂದರೆ...?
ನವದೆಹಲಿ, ಫೆ. 7– ಶೇಕಡ 30 ರಷ್ಟು ಮಂದಿಗೂ ಪಂಚವಾರ್ಷಿಕ ಯೋಜನೆ ಏನೆಂಬುದು ತಿಳಿದಿಲ್ಲವೆಂದು ಇಲ್ಲಿಯ ಭಾರತೀಯ ಜನಸಂಪರ್ಕ ಸಂಸ್ಥೆಯವರು ಇತ್ತೀಚೆಗೆ ಉತ್ತರ ಪ್ರದೇಶದ ಹಳ್ಳಿಯೊಂದ ರಲ್ಲಿ ನಡೆಸಿದ ಪ್ರಶ್ನೋತ್ತರಗಳ ಮೂಲಕದ ಅಧ್ಯಯನದಿಂದ ಗೊತ್ತಾಗಿದೆ.
 
**
ಮೈಸೂ​ರಿಗೆ ಹೆಚ್ಚೆಂದರೆ 12 ಮಂತ್ರಿಗಳು ಸಾಕು
ಬೆಂಗಳೂರು, ಫೆ. 7– ‘ಮೈಸೂರಿಗೆ 11 ಜನ ಮಂತ್ರಿಗಳು ಸಾಕು. ಹೆಚ್ಚೆಂದರೆ 12 ಇರಬಹುದು’ ಎಂದು ಆಡಳಿತ ಸುಧಾರಣಾ ಆಯೋಗದ ಸದಸ್ಯ ಶ್ರೀ ಕೆಂಗಲ್‌ ಹನುಮಂತಯ್ಯನವರು ಇಂದು ಇಲ್ಲಿ ನುಡಿದರು.
 
ಸೆಕ್ರೆಟೇರಿಯೇಟ್‌ ಕ್ಲಬ್‌ನಲ್ಲಿ ಮಾತನಾಡುತ್ತಿದ್ದ ಅವರು ತಾವು ಪಂಜಾಬಿನ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಅಲ್ಲಿಗೆ 10 ಜನ ಮಂತ್ರಿಗಳು ಸಾಕೆಂದು ಶಿಫಾರಸು ಮಾಡಿದ್ದನ್ನು ಸ್ಮರಣೆಗೆ ತಂದರು.
 
ಇಲಾಖಾ ಕಾರ್‍ಯದರ್ಶಿಗಳ ಸಂಖ್ಯೆ ಮತ್ತು ಸಚಿವರ ಸಂಖ್ಯೆ ಸರಿಸಮನಾಗಿರಬೇಕೆಂದು ಅಭಿಪ್ರಾಯಪಟ್ಟ ಅವರು, ‘ಒಬ್ಬ ಗಂಡನಿಗೆ ಒಬ್ಬ ಪತ್ನಿಯಂತಿರಬೇಕೇ ವಿನಾ ವ್ಯತ್ಯಾಸವಾದರೆ ಸರಿಹೋಗದು. ಕಾರ್‍ಯದರ್ಶಿಗಳ ಸಂಖ್ಯೆ 10ಕ್ಕಿಂತ ಹೆಚ್ಚಾಗಬಾರದು’ ಎಂದರು.
 
**
ಭಾರತಕ್ಕೆ ಮತ್ತೆ 30 ಲಕ್ಷ ಟನ್‌ ಅಮೆರಿಕದ ಧಾನ್ಯ ನೀಡಲು ಸಲಹೆ
ವಾಷಿಂಗ್ಟನ್‌, ಫೆ. 7– ಇತರ ದೇಶಗಳೂ ನೆರವು ನೀಡಲು ಮುಂದಾದ ಪಕ್ಷದಲ್ಲಿ ಭಾರತಕ್ಕೆ ಮೂವತ್ತು ಲಕ್ಷ ಟನ್‌ನಷ್ಟು ಧಾನ್ಯ ನೀಡಬೇಕೆಂಬ ಅಧ್ಯಕ್ಷ ಜಾನ್ಸನ್‌ ಅವರ ಸೂಚನೆಯನ್ನು ಬೆಂಬಲಿಸುವ ನಿರ್ಣಯವೊಂದನ್ನು ಕಾಂಗ್ರೆಸ್‌ನ ಉಭಯ ಸದನಗಳಲ್ಲೂ ನಿನ್ನೆ ಮಂಡಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.