ADVERTISEMENT

ಭಾನುವಾರ 16–7–1967

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 19:30 IST
Last Updated 15 ಜುಲೈ 2017, 19:30 IST

ಗುಜರಾತ್‌ನಲ್ಲಿ ಹಿಂಸಾಚಾರ: ಅಶ್ರುವಾಯು, ಗಾಳಿಯಲ್ಲಿ ಗುಂಡು
ಅಹಮದಾಬಾದ್‌, ಜುಲೈ 15– ಇಲ್ಲಿನ ಭಾವನಗರದಲ್ಲಿ ಇಂದು ಪ್ರತಿಭಟನಾಕಾರರ ಗುಂಪು ಹಿಂಸಾಚಾರಕ್ಕೆ ಇಳಿದದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಲ್ಲದೆ ಹಲವು ಸುತ್ತು ಅಶ್ರುವಾಯು ಶೆಲ್‌ಗಳನ್ನೂ ಸಿಡಿಸಬೇಕಾಯಿತು. ಅಷ್ಟಕ್ಕೂ ಗಲಭೆ ನಿಯಂತ್ರಣಕ್ಕೆ ಬಾರದಿದ್ದಾಗ ಮೀಸಲು ಪಡೆಯ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಪ್ರತಿಭಟನಾಕಾರರ ಗುಂಪು ಏಕಾಏಕಿ ಹಿಂಸಾಚಾರಕ್ಕೆ ಇಳಿದು ಕೆಲವು ಕಟ್ಟಡಗಳಿಗೆ ಕೊಳ್ಳಿ ಇಟ್ಟಿತು, ಅನೇಕ ಧಾನ್ಯದ ಅಂಗಡಿಗಳನ್ನು ಲೂಟಿಮಾಡಿತು, ಕೆಲವು ಸರ್ಕಾರಿ ಕಟ್ಟಡಗಳಿಗೆ ಕಲ್ಲೆಸೆದದ್ದಲ್ಲದೆ ಅನೇಕ ಕಡೆ ಟೆಲಿಫೂನ್‌ ವೈರ್‌ಗಳನ್ನು ಕತ್ತರಿಸಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಸುಮಾರು 60ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಯಿತು. ಘಟನೆಯಲ್ಲಿ ಕೆಲವು ಪೊಲೀಸರೂ ಸೇರಿದಂತೆ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಮಹುವಾ ಪಟ್ಟಣದಲ್ಲೂ ಹಿಂಸಾಚಾರಕ್ಕೆ ಇಳಿದಿದ್ದ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾಗಿ ವರದಿಯಾಗಿದೆ.

ನಾಗಾರ್ಜುನ ಸಾಗರ ಯೋಜನೆ

ವಿರುದ್ಧ ಕ್ರಮಕ್ಕೆ ಚಿಂತನೆ - ಕೇಂದ್ರ ಸರ್ಕಾರದ ಸೂಚನೆಯ ಹೊರತಾಗಿಯೂ ಆಂಧ್ರಪ್ರದೇಶ ಸರ್ಕಾರ ನಾಗಾರ್ಜುನ ಸಾಗರ ಯೋಜನೆಯನ್ನು ಮುಂದುವರಿಸಿದರೆ ರಾಜ್ಯ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.