ADVERTISEMENT

ಭಾನುವಾರ, 29–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 19:30 IST
Last Updated 28 ಜನವರಿ 2017, 19:30 IST
ಅಮೆರಿಕದ ಅಂತರಿಕ್ಷ ನೌಕೆ ಭಸ್ಮ; ಮೂವರು ಗಗನ ಯಾತ್ರಿಗಳ ಸಾವು
ಕೇಪ್‌ಕೆನೆಡಿ, ಜ. 28– ಪ್ರಯೋಗ ಪೀಠದಲ್ಲಿದ್ದ ಬೃಹತ್‌ ಸಾಟರ್ನ್‌–1 ರಾಕೆಟ್‌ಗೆ ಪ್ರದರ್ಶನಾಭ್ಯಾಸ ಕಾಲದಲ್ಲಿ ನಿನ್ನೆ ಬೆಂಕಿ ಆವರಿಸಿಕೊಂಡಿದ್ದರಿಂದ ರಾಕೆಟ್‌ ಒಳಗೆ ಆಸನಾರೂಢರಾಗಿದ್ದ ಮೂರು ಮಂದಿ ಅಮೆರಿಕನ್‌ ಗಗನಯಾತ್ರಿಗಳು ಸಾವಿಗೀಡಾದರು. 218 ಅಡಿ ಎತ್ತರದ ಈ ರಾಕೆಟ್‌ನ ಬಾಗಿಲುಗಳನ್ನು ತೆಗೆಯಲು ಕೆಲಸಗಾರರು ಯತ್ನಿಸಿದರು. ಆದರೆ ದಟ್ಟವಾದ ಹೊಗೆ ಕವಿದಿದ್ದರಿಂದ ಆ ಪ್ರಯತ್ನ ವಿಫಲವಾಯಿತು.
 
**
ಮಾಜಿ ಸೈನಿಕರ ಯೂನಿಯನ್‌:  ಜನರಲ್‌ ಕಾರಿಯಪ್ಪ ತೀವ್ರ ವಿರೋಧ
ಬೆಂಗಳೂರು, ಜ. 28– ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಾಜಿ ಸೈನಿಕರು ಯೂನಿಯನ್‌ ಕಟ್ಟಿಕೊಳ್ಳುವುದಕ್ಕೆ ಭಾರತದ ಮಾಜಿ ಮಹಾ ದಂಡನಾಯಕ ಜನರಲ್‌ ಕೆ.ಎಂ. ಕಾರಿಯಪ್ಪ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
 
‘ರಾಷ್ಟ್ರ ಸೇವೆಗಾಗಿ ಪಣತೊಟ್ಟ ಅವರಿಗೆ (ಮಾಜಿ ಸೈನಿಕರಿಗೆ) ಶಿಸ್ತೇ ಜೀವಾಳ. ಯೂನಿಯನ್ನುಗಳನ್ನು ಕಟ್ಟಿಕೊಂಡು ಶಿಸ್ತಿಗೆ ಭಂಗ ತರಿಸುವ ಚಟುವಟಿಕೆಗಳಲ್ಲಿ ಅವರು ತೊಡಗುವುದು, ಅವರ ಜೀವನ ನೀತಿಗೆ ವಿರುದ್ಧ ಬೇಡಿಕೆಗಳನ್ನು ಈಡೇರಿಸಲು ಸೂಕ್ತವಾದ ಬೇರೆ ದಾರಿಗಳಿವೆ, ಅಧಿಕಾರಿಗಳಿದ್ದಾರೆ, ಸರ್ಕಾರವಿದೆ’ ಎಂದು ಅವರು 515 ಆರ್ಮಿ ಬೇಸ್‌ ವರ್ಕ್‌ಷಾಪ್‌ನಲ್ಲಿ ಇಂದು ಬೆಳಿಗ್ಗೆ ಜರುಗಿದ ಸಮಾರಂಭವೊಂದರಲ್ಲಿ, ವರ್ಕ್‌ಷಾಪ್‌ನ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದಾಗ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.