ADVERTISEMENT

ಮಂಗಳವಾರ, 18–7–1967

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST

* ಮದ್ರಾಸ್‌ ರಾಜ್ಯಕ್ಕೆ ಕೃಷ್ಣಾ ನದಿ ನೀರು ಇಲ್ಲ: ಮೈಸೂರು ಸರ್ಕಾರ
ಬೆಂಗಳೂರು, ಜುಲೈ 17–
ಮದ್ರಾಸ್‌ ರಾಜ್ಯಕ್ಕೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವುದಾಗಿ ಆ ಸರ್ಕಾರದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮೈಸೂರು ಸರ್ಕಾರ ಸೋಮವಾರ ತಿಳಿಸಿದೆ.

ವಿಧಾನ ಸಭೆಯಲ್ಲಿ ಲೋಕೋಪಯೋಗಿ ಸಚಿವರಾದ ವೀರೇಂದ್ರ ಪಾಟೀಲ್‌ ಅವರು ಮದ್ರಾಸ್‌ ರಾಜ್ಯಕ್ಕೆ ಕೃಷ್ಣಾ ನದಿಯಿಂದ ನೀರು ಕೊಡುವ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

1947ರ ರಾಜ್ಯಗಳ ನದಿ ನೀರು ಕಾಯ್ದೆಯಲ್ಲಿ ಕೃಷ್ಣಾ ನದಿಯಿಂದ ಮದ್ರಾಸ್‌  ರಾಜ್ಯಕ್ಕೆ ನೀರು ಕೊಡುವ ಯಾವುದೇ ಪ್ರಸ್ತಾವಗಳನ್ನು ಸೇರಿಸಿಲ್ಲ ಎಂದರು.

ADVERTISEMENT

* ಆಂಧ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ: ಮಹಾ ಸರ್ಕಾರ
ಮುಂಬೈ, ಜುಲೈ 17–
ವಿಸ್ತರಿತ ನಾಗಾರ್ಜುನ ಸಾಗರ ಅಣೆಕಟ್ಟು ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರದ ವಿರುದ್ಧ  ಕಾನೂನು ಹೋರಾಟ ನಡೆಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ನೀರಾವರಿ ಸಚಿವ ಶ್ರೀ ಎಸ್‌.ಬಿ. ಚವ್ಹಾಣ್‌ ಅವರು, ಆಂಧ್ರಪ್ರದೇಶ ಸರ್ಕಾರವು ಮಹಾರಾಷ್ಟ್ರ ಸರ್ಕಾರದ ಅನುಮತಿ ಇಲ್ಲದೆ ನಾಗಾರ್ಜುನ ಸಾಗರ ಅಣೆಕಟ್ಟೆ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ. ಇದು ಕಾನೂನುಬಾಹಿರ ಎಂದರು.

* ಜೈಲಿಗೆ ಬೆಂಕಿ: 37 ಕೈದಿಗಳ ಸಾವುಜಾಯ್‌,
ಜುಲೈ 17–
 ಅಮೆರಿಕದ ಫ್ಲಾರಿಡಾ ರಾಜ್ಯದ ಜಾಯ್‌ ಪಟ್ಟಣದಲ್ಲಿರುವ ಜೈಲಿಗೆ ಬೆಂಕಿ ತಗುಲಿದ್ದು 37 ಕೈದಿಗಳು ಮೃತಪಟ್ಟಿದ್ದಾರೆ.
ಮೃತಪಟ್ಟ ಕೈದಿಗಳು ಮರದ ಬ್ಯಾರಕ್‌ನಲ್ಲಿ ಇದ್ದರು ಎಂದು ಅಮೆರಿಕ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಜೈಲಿನಲ್ಲಿ 51 ಕೈದಿಗಳು ಇದ್ದರು. ಇವರಲ್ಲಿ 14 ಕೈದಿಗಳಿಗೆ ಸುಟ್ಟ ಗಾಯಗಳಾಗಿವೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.