ADVERTISEMENT

ಮಂಗಳವಾರ, 27–9–1966

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST

ವಿಯೆಟ್ನಾಂ ಶಾಂತಿ ಸಂಧಾನಕ್ಕೆ ಕರೆ
ನವದೆಹಲಿ, ಸೆ. 26– 
ವಿಯೆಟ್ನಾಂ ಸಮರದಲ್ಲಿ ಭಾಗಿಗಳಾದ ರಾಷ್ಟ್ರಗಳನ್ನು ಸಂಧಾನದಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಶಾಂತಿಪ್ರಿಯ ರಾಷ್ಟ್ರಗಳಿಗೆ ಮನವಿ ಮಾಡಿಕೊಳ್ಳುವುದರೊಂದಿಗೆ, ದಿವಂಗತ ಜವಾಹರಲಾಲ್‌ ನೆಹರೂರನ್ನು ಕುರಿತ ಅಂತರರಾಷ್ಟ್ರೀಯ ಚಕ್ರಗೋಷ್ಠಿಯೊಂದನ್ನು ರಾಷ್ಟ್ರಪತಿ ಡಾ. ಎಸ್‌. ರಾಧಾಕೃಷ್ಣನ್‌ ಇಂದು ಉದ್ಘಾಟಿಸಿದರು.

‘ಇದೇ ವಿವೇಕದ ಮಾರ್‍ಗ’ ಎಂದೂ ಅವರು ನುಡಿದರು. ತನ್ನ ಸದಸ್ಯ ರಾಷ್ಟ್ರವೊಂದರ ರಾಜ್ಯ ತಂತ್ರಜ್ಞರೊಬ್ಬರಿಗೆ ಗೌರವವನ್ನು ಅರ್ಪಿಸಲು ಯುನೆಸ್ಕೋ ಏರ್ಪಡಿಸಿರುವ ಮೊದಲನೆಯ ಸಮ್ಮೇಳನವಾದ ಈ ನಾಲ್ಕು ದಿನಗಳ ಚಕ್ರಗೋಷ್ಠಿಯಲ್ಲಿ ವಿಶ್ವದ ಎಲ್ಲ ಭಾಗಗಳ ರಾಜ್ಯ ತಂತ್ರಜ್ಞರು ಮತ್ತು ವಿದ್ವಾಂಸರು ಭಾಗವಹಿಸಿದ್ದಾರೆ.

ಪುನರ್ಜನ್ಮದ ಸಿದ್ಧಾಂತಕ್ಕೆ
ವಿಜ್ಞಾನದ ಅಸ್ತು
ಜಯಪುರ, ಸೆ. 26–
ಪುನರ್ಜನ್ಮದ ಸಿದ್ಧಾಂತವನ್ನು ವೈಜ್ಞಾನಿಕವಾಗಿ ನಂಬಬಹುದು. ರಾಜಸ್ತಾನ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರ ವಿಭಾಗದ ಡೈರೆಕ್ಟರ್‌ ಪ್ರೊಫೆಸರ್‌ ಎಚ್.ಎನ್‌. ಬ್ಯಾನರ್ಜಿ ಅವರು ಸಂಶೋಧನೆ ನಡೆಸಿ ಇದಕ್ಕೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.

ಪ್ರೊ. ಬ್ಯಾನರ್ಜಿ ಅವರು ಇಂಗ್ಲೆಂಡ್‌, ಡೆನ್ಮಾರ್ಕ್‌, ನಾರ್ವೆ, ಅಮೆರಿಕ, ಫಿಲಿಪ್ಪೀನ್ಸ್‌ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ, ತಮಗೆ ಹಿಂದಿನ ಜನ್ಮದ ಜ್ಞಾಪಕವಿದೆ ಎಂದು ಹೇಳಿಕೊಳ್ಳುವ ಅನೇಕ ಮಂದಿಯೊಡನೆ ಸಂದರ್ಶನ ನಡೆಸಿದ್ದಾರೆ. ಗತಜನ್ಮದ ಸ್ಮರಣೆಯ ಸುಮಾರು500 ಪ್ರಕರಣಗಳ ಬಗ್ಗೆ ಅವರಿಗೆ ವರದಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.