ADVERTISEMENT

ಶುಕ್ರವಾರ, 13–1–1967

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST

ಎಂ.ಜಿ.ಆರ್‌. ಮೇಲೆ ಎಂ.ಆರ್‌. ರಾಧಾ ಗುಂಡೇಟು
ಮದರಾಸು, ಜ. 12–
ಖ್ಯಾತ ತಮಿಳು ಚಲನಚಿತ್ರ ನಟ ಎಂ.ಜಿ.ಆರ್‌. (ಎಂ.ಜಿ. ರಾಮಚಂದ್ರನ್‌)ರವರ ಮೇಲೆ ತಮಿಳು ಚಿತ್ರರಂಗದ ಇನ್ನೊಬ್ಬ ನಟ ಎಂ.ಆರ್‌. ರಾಧಾರವರು ಇಂದು ಸಂಜೆ ಗುಂಡು ಹಾರಿಸಿದರು.

ರಾಧಾರವರು ಬಳಿಕ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡರೆಂದೂ ವರದಿಗಳು ತಿಳಿಸಿವೆ. ಇಬ್ಬರನ್ನೂ ಈಗ ಮದರಾಸಿಗೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿದೆ.

ಎಂ.ಜಿ. ರಾಮಚಂದ್ರನ್‌ ದ್ರಾವಿಡ ಮುನ್ನೇತ್ರಕಳಗಂ ಬೆಂಬಲಿಗರು, ಆ ಪಕ್ಷದ ಪರವಾಗಿ ಅವರು ಮದರಾಸು ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದವರು.
ತಮಿಳು ಚಿತ್ರಗಳಲ್ಲಿ ಖಳನಾಯಕನ ಪಾತ್ರ ಅಭಿನಯಿಸುವ ಎಂ.ಆರ್‌. ರಾಧಾರವರು ದ್ರಾವಿಡಕಳಗಂನ (ಈ.ವಿ. ರಾಮಸ್ವಾಮಿ ನಾಯಕರ್‌ ನಾಯಕತ್ವ) ಮುಖ್ಯ ಬೆಂಬಲಿಗರು. ಬರುವ ಚುನಾವಣೆಯಲ್ಲಿ ದ್ರಾವಿಡಕಳಗಂ, ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಪ್ರಕಟಿಸಿದೆ.

ಎಂ.ಜಿ.ಆರ್‌. ಸುರಕ್ಷಿತ; ರಾಧಾ ಪರಿಸ್ಥಿತಿ ಕಳವಳಕರ
ಮದರಾಸು, ಜ. 12–
ಚಿತ್ರನಟ ಎಂ.ಜಿ.ಆರ್‌. ಮೇಲೆ ಇಂದು ಗುಂಡು ಹಾರಿಸಿ, ತಾವೂ ಗುಂಡಿಕ್ಕಿಕೊಂಡ ಇನ್ನೊಬ್ಬ ಚಿತ್ರನಟ ಎಂ.ಆರ್‌.ರಾಧಾ ಅವರ ಪರಿಸ್ಥಿತಿ ಕಳವಳಕರವಾಗಿದೆ ಎಂದು ತಿಳಿದುಬಂದಿದೆ. ರಾಯಪೇಟೆ ಆಸ್ಪತ್ರೆಯಿಂದ ನೇರವಾಗಿ ಅವರನ್ನು ಜನರಲ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.