ADVERTISEMENT

ಶುಕ್ರವಾರ, 3–2–1967

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 19:30 IST
Last Updated 2 ಫೆಬ್ರುವರಿ 2017, 19:30 IST

ಅಮೆರಿಕದಿಂದ 20 ಲಕ್ಷ ಟನ್‌ ತುರ್ತು ಆಹಾರಧಾನ್ಯ ನೀಡಿಕೆ
ವಾಷಿಂಗ್ಟನ್‌, ಫೆ. 2– ಭಾರತಕ್ಕೆ ಈ ಕೂಡಲೇ 20 ಲಕ್ಷ ಟನ್‌ ಆಹಾರ ಧಾನ್ಯವನ್ನು ನೀಡಿರುವುದಾಗಿ ಅಮೆರಿಕದ ಅಧ್ಯಕ್ಷ ಜಾನ್‌ಸನ್‌ ಅವರು ಇಂದು ಪ್ರಕಟಿಸಿದರು.

ಭಾರತದ ತುರ್ತು ಆಹಾರ ಅವಶ್ಯಕತೆಗಳನ್ನು ಪೂರೈಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಜಾನ್‌ಸನ್‌ರು ಉಳಿದ ರಾಷ್ಟ್ರಗಳೂ ಅಮೆರಿಕದಷ್ಟೇ ಧಾನ್ಯ ನೀಡುವುದಾದರೆ ಭಾರತಕ್ಕೆ ಇನ್ನೂ 30 ಲಕ್ಷ ಟನ್‌ ಧಾನ್ಯಗಳನ್ನೂ ನೀಡಬೇಕೆಂಬ ತಮ್ಮ ಮತ್ತೊಂದು ಶಿಫಾರಸನ್ನು ಅಮೆರಿಕದ ಕಾಂಗ್ರೆಸ್‌ ಪರಿಶೀಲಿಸುತ್ತದೆ ಎಂದರು.

ಅಂಚೆ ಮೂಲಕ ಮತ ನೀಡಲು ಪ್ರಧಾನಿಗೆ ಹಕ್ಕು
ಚುನಾವಣಾ ಶಾಸನದ ಪ್ರಕಾರ ಅಂಚೆ ಮೂಲಕ ಮತ ನೀಡುವ ಹಕ್ಕು ಪ್ರಧಾನ ಮಂತ್ರಿಗಿದೆ ಎಂದು ಹೇಳಿದ ಪ್ರಧಾನ ಚುನಾವಣಾ ಕಮಿಷನರಾದ ಶ್ರೀ ಕೆ.ವಿ.ಕೆ. ಸುಂದರಂ ಅವರು ಪ್ರಧಾನಿಯವರಿಂದ ಅಂತಹ ಬೇಡಿಕೆ ಬಂದರೆ, ಚುನಾವಣಾ ಮಂಡಳಿಯು ಬೇಡಿಕೆಯನ್ನು ಮಾನ್ಯ ಮಾಡುವುದೆಂದರು.

ADVERTISEMENT


ತಿರುಪತಿ ಸಭೆಯಲ್ಲಿ ಕಾಮರಾಜ್‌ಗೆ ಕಲ್ಲೇಟು?
ತಿರುಪತಿ, ಫೆ. 2–
ಬುಧವಾರ ರಾತ್ರಿ ಇಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ವೇದಿಕೆಯತ್ತ ಜನರು ಕಲ್ಲು ಇಟ್ಟಿಗೆ ತೂರಿದ್ದರಿಂದ ಕಾಂಗ್ರೆಸ್‌ ಅಧ್ಯಕ್ಷ ಕಾಮರಾಜರ ಹಣೆಗೆ ಕಲ್ಲೇಟು ಬಿದ್ದಿತೆಂದು ವರದಿಯಾಗಿದೆ.

ಆಂಧ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಪಿ. ತಿಮ್ಮಾರೆಡ್ಡಿಯವರ ತಲೆಗೆ ಪೆಟ್ಟುಬಿದ್ದು ವಿಪರೀತ ರಕ್ತಸ್ರಾವವಾಯಿತೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.