ADVERTISEMENT

ಸೋಮವಾರ, 28–8–1967

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2017, 19:30 IST
Last Updated 27 ಆಗಸ್ಟ್ 2017, 19:30 IST

ಬಿಹಾರದಲ್ಲಿ ಕಾಂಗ್ರೆಸ್ ಸ‌ಮ್ಮಿಶ್ರ ಸರ್ಕಾರ ಸಂಭವ: ಹೊಸದಾಗಿ ಜನ್ಮ ತಾಳಿದ ‘ಶೋಷಿತ ದಳ’ದ ನಾಯಕ ಶ್ರೀ ಬಿ.ಪಿ. ಮಂಡಲ್ ಯತ್ನ
ಪಟ್ನ, ಆ. 27–
ಬಿಹಾರದಲ್ಲಿ ಹೊಸದಾಗಿ ರಚಿತವಾಗಿರುವ ‘ಶೋಷಿತ ದಳ’ದ ನಾಯಕ ಶ್ರೀ ಬಿ.ಪಿ. ಮಂಡಲ್ ಅವರು ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚಿಸಲು ನಾಳೆ ರಾಂಚಿಯಲ್ಲಿ ರಾಜ್ಯಪಾಲರ ಅನುಮತಿ ಕೇಳುವ ನಿರೀಕ್ಷೆ ಇದೆ.

ಬಿಹಾರ್ ಕಾಂಗ್ರೆಸ್‌ನ ಶಾಸನಸಭಾ ಪಕ್ಷದೊಡನೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಲು ಶ್ರೀ ಮಂಡಲ್ ಪ್ರಯತ್ನ ನಡೆಸಿದ್ದಾರೆ. ರಾಜ್ಯ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ಇತ್ತ ಶ್ರೀ ಮಂಡಲ್ ಅವರು, ವಿಧಾನಸಭೆಯಲ್ಲಿ ಈ ಹೊಸ ಗುಂಪಿನ (ಕಾಂಗ್ರೆಸ್– ಶೋಷಿತ ದಳ) ಸದಸ್ಯರ ಹೆಸರನ್ನು ಬಹುಶಃ ನಾಳೆ ರಾಜ್ಯಪಾಲರಿಗೆ ತಿಳಿಸುವುದಾಗಿ ಹೇಳಿದರು.

ವಿಧಾನಸಭೆಯ ಸುಮಾರು 40 ಸದಸ್ಯರು ‘ಶೋಷಿತ ದಳ’ಕ್ಕೆ ಸೇರಿರುವುದಾಗಿ ಶ್ರೀ ಮಂಡಲ್ ತಿಳಿಸಿದರು.

ADVERTISEMENT

ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿಗೆ ನಿರ್ಧಾರ ಸಂಭವ
ಮುಂಬಯಿ, ಆ 27–
ಬ್ಯಾಂಕುಗಳ ಬಗ್ಗೆ ‘ಸಾಮಾಜಿಕ ಹತೋಟಿ’ಯನ್ನು ಅನ್ವಯ ಮಾಡಲು ಕೇಂದ್ರ ಸರಕಾರವು ಅಂತಿಮವಾಗಿ ನಿರ್ಧರಿಸುವುದೆಂಬುದು ಇಲ್ಲಿಯ ಬ್ಯಾಂಕಿಂಗ್ ವೃತ್ತಗಳ ನಿರೀಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.