ADVERTISEMENT

ಶನಿವಾರ, 13–1–1968

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST

ಮುಂದಿನ ನಾಯಕರ ಆಯ್ಕೆ: ಪ್ರಭಾವ ಬೀರುವುದಕ್ಕೆ ನಿಜಲಿಂಗಪ್ಪ ವಿರೋಧ
ಬೆಂಗಳೂರು, ಜ. 12–
ಮೈಸೂರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್‌ನವರು ಪ್ರಭಾವ ಬೀರಲು ಯತ್ನಿಸುವುದನ್ನು ತಾವು ವಿರೋಧಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.

ಹೈದರಾಬಾದ್ ಅಧಿವೇಶನದ ಸಮಯದಲ್ಲಿ ಮೈಸೂರು ಶಾಸನಸಭೆ ಕಾಂಗ್ರೆಸ್ ಪಕ್ಷದ ಮುಂದಿನ ನಾಯಕರ ಆಯ್ಕೆ ವಿಷಯದಲ್ಲಿ ಬಂದ ಸುದ್ದಿಗಳತ್ತ ವರದಿಗಾರರು ಅವರ ಗಮನ ಸೆಳೆದು ಅವರ ಪ್ರಕ್ರಿಯೆಗಾಗಿ ಕೇಳಿದಾಗ, ‘ಪ್ರಭಾವಬೀರಲಾಗುತ್ತಿತ್ತೆಂದು (ಲಾಬಿಯಿಂಗ್) ನನಗೆ ತಿಳಿಸಲಾಯಿತು ಇದರಿಂದ ವಿಷಾದವಾಯಿತು' ಎಂದರು.

ಕಾಂಗ್ರೆಸ್ಸೇತರ ಸರಕಾರಗಳ ರಚನೆಯಲ್ಲಿ ತತ್ವ ಸಾಮೀಪ್ಯದ ಅಗತ್ಯ
ಬೆಂಗಳೂರು, ಜ. 12–
ಕಾಂಗ್ರೆಸ್ಸೇತರ ಸರಕಾರಗಳ ವಿಷಯದಲ್ಲಿ ಕಾಂಗ್ರೆಸ್‌ನ ಹೈದರಾಬಾದ್ ಅಧಿವೇಶನ ಅಂಗೀಕರಿಸಿದ ನಿರ್ಣಯವು ಕಾಂಗ್ರೆಸ್ಸೇತರ ಸರಕಾರಗಳನ್ನು ತೆಗೆದು ಹಾಕುವುದಕ್ಕಿಂತ ಹೆಚ್ಚಾಗಿ ಪರಸ್ಪರ ಒಪ್ಪುವ ತತ್ವಗಳ ಆಧಾರದ ಮೇಲಿನ ಸರಕಾರಗಳಿರಬೇಕೆಂಬುದನ್ನು ಒತ್ತಿ ಹೇಳುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.

ADVERTISEMENT

ದೇಶದ ಪ್ರಗತಿ ಸಾಧನೆಯಾಗಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ‘ಸಮಾನ ತಾತ್ವಿಕ ಹೊಂದಾಣಿಕೆಯಿಲ್ಲದ ಗುಂಪುಗಳಿಂದ ಸಾಧ್ಯವಿಲ್ಲ’ ಎಂದರು.

ಕೇರಳದಲ್ಲಿ ಎರಡು ಎಕರೆ ಜಮೀನಿಗೆ ಕಂದಾಯ ರದ್ದು
ತಿರುವನಂತಪುರ, ಜ. 12–
  ಎರಡು ಎಕರೆಗೆ ಕಡಿಮೆ ಇರುವ ಜಮೀನಿಗೆ ಭೂ ಕಂದಾಯದಿಂದ ವಿನಾಯಿತಿ ನೀಡಲು ಕೇರಳ ಸರ್ಕಾರ ಉದ್ದೇಶಿಸಿದೆ. ಕೇರಳ ವಿಧಾನ ಸಭೆಯ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಇಂದು ಮಾಡಿದ ಭಾಷಣದಲ್ಲಿ ಈ ವಿಚಾರವನ್ನು ಪ್ರಕಟಿಸಿದರು.

ಕಾಂಗ್ರೆಸ್ ಅಧ್ಯಕ್ಷರಾಗಿ ‘ಮನೆಗೆ ಮರಳಿದ’ ಎಸ್ಸೆನ್ ಅವರಿಗೆ ಭವ್ಯ ಸ್ವಾಗತ
ಬೆಂಗಳೂರು, ಜ. 12–
ಕಾಂಗ್ರೆಸ್ ಅಧ್ಯಕ್ಷರಾಗಿ ‘ಮನೆಗೆ ಮರಳಿದ’ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ಬೆಂಗಳೂರಿನ ಜನತೆ, ಇಂದು ಅಪೂರ್ವ ಸಂಭ್ರಮ, ಉತ್ಸಾಹ ಮತ್ತು ಒಲವಿನೊಂದಿಗೆ ಬರಮಾಡಿಕೊಂಡಿತು.

ಹಿಂದಿಗೆ ಹೊಸ ದೃಷ್ಟಿ, ಹೊಸ ಶಕ್ತಿ ತುಂಬಬೇಕು
ಹೈದರಾಬಾದು, ಜ. 12–
ಹಿಂದಿ ಭಾಷೆಗೆ ಹೊಸ ದೃಷ್ಟಿ ಮತ್ತು ಹೊಸ ಶಕ್ತಿ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಲ್ಲಿ ಇಂದು ಹೇಳಿದರು.

ಮದರಾಸಿನ ಹಲವು ಕಡೆ ಹಿಂದಿ ವಿರೋಧಿ ಚಳವಳಿ ಮತ್ತೆ ಆರಂಭ
ಮಧುರೆ, ಜ. 12–
ತಿರುನೆಲ್‌ವೇಲಿ ಜಿಲ್ಲೆಯ ಕೋಯಿಲ್‌ಪಟ್ಟಿ ಬಳಿ ಹಿಂದಿ ವಿರೋಧಿ ಚಳವಳಿಗಾರರು ಗೂಡ್ಸ್ ರೈಲೊಂದನ್ನು ತಡೆದು ನಿಲ್ಲಿಸಿ ಕಲ್ಲುಗಳನ್ನು ತೂರಿದ ಫಲವಾಗಿ ಫೈರ್‌ಮನ್‌ಗೆ ಗಾಯಗಳಾಗಿವೆ.

ರಾಜ ನಾರಾಯಣ್ ಅವರ ನಿರಶನ
ವಾರಾಣಸಿ, ಜ. 12–
ಸಂಯುಕ್ತ ಸೋಷಲಿಸ್ಟ್ ಪಕ್ಷದ ನಾಯಕ ಶ್ರೀ ರಾಜ್ ನಾರಾಯಣ್ ಅವರು ಕಾಶಿ ಹಿಂದೂ ವಿಶ್ವವಿದ್ಯಾಲಯದ ಮುಖ್ಯ ದ್ವಾರದ ಹೊರಗಡೆಯಲ್ಲಿ ಇಂದು ಸಂಜೆ ಅನಿರ್ದಿಷ್ಟ ಕಾಲದ ಅನ್ನ ಸತ್ಯಾಗ್ರಹ ಅರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.