ADVERTISEMENT

ಅನುಕರಣೀಯ ನಡೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ನಾನು ಬಹಳ ವರ್ಷಗಳಿಂದ ‘ಪ್ರಜಾವಾಣಿ’ ಪತ್ರಿಕೆಯ ಓದುಗ. ಬೆಳಿಗ್ಗೆ ಕಾಫಿ ಕುಡಿಯುತ್ತ ಮಾಡುವ ಕೆಲಸ ಪತ್ರಿಕೆಯನ್ನು ಸಂಪೂರ್ಣವಾಗಿ ಓದುವುದು. ಮೊನ್ನೆ ಹಾಗೆ ಓದುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಡಾ. ಬಿ.ಎನ್‌. ಗಂಗಾಧರ್‌ ಅವರ  ಸಂದರ್ಶನ ಹಾಗೂ ಹುತಾತ್ಮ ಯೋಧರ ಕುಟುಂಬಗಳಿಗೆ ಫ್ಲ್ಯಾಟ್‌ ನೀಡುವುದಾಗಿ ಹೇಳಿರುವ ವಿವೇಕ್‌ ಒಬೆರಾಯ್‌ ಅವರ ಮಾನವೀಯ ಕ್ರಮ (ಪ್ರ.ವಾ., ಮೇ 14).
 
ಎರಡೂ ಬಹಳ ಉತ್ತಮವಾದುವು. ಸಂದರ್ಶನದ ಬಗ್ಗೆ ಡಾ. ಗಂಗಾಧರ್‌ ಅವರಿಗೆ ಈಗಾಗಲೇ ಒಂದು ಕಾಗದ ಬರೆದಿದ್ದೇನೆ.  ಒಬೆರಾಯ್‌ ಅವರ ದಾನ–ಧರ್ಮದ ಕೆಲಸ ಶ್ಲಾಘನೀಯ. ಇಂತಹವರು ಬಹಳ ಅಪರೂಪ. 
 
ನಮ್ಮಲ್ಲಿ ಶ್ರೀಮಂತರು ಅನೇಕರಿದ್ದಾರೆ. ಆದರೆ ಮುಕ್ತ ಮನಸ್ಸಿನಿಂದ ದಾನ–ಧರ್ಮ ಮಾಡುವವರು ವಿರಳ. ಹಾಗೆ ಮಾಡಿದಾಗ ಎತ್ತಿ ತೋರಿಸಬೇಕಾದ್ದು ಮಾಧ್ಯಮದವರ  ಕೆಲಸ. ‘ಪ್ರಜಾವಾಣಿ’ ಅದನ್ನು ಚೆನ್ನಾಗಿ ನಿಭಾಯಿಸಿದೆ. ಅದಕ್ಕಾಗಿ ನನ್ನ ವಂದನೆ. 
 
ಪರೋಪಕಾರದ ಇಂತಹ ಕೆಲಸಗಳಿಗೆ ಕನ್ನಡಿ ಹಿಡಿದಂತೆ ಸಮಾಜಕ್ಕೆ ತೋರಿಸುವುದು ಅಗತ್ಯ. ಇನ್ನೂ ಒಂದಷ್ಟು ಶ್ರೀಮಂತರು ನೆರವು ನೀಡಲು ಮುಂದೆ ಬರಬಹುದು. 29 ಮಹಡಿಯ ಮನೆ ಕಟ್ಟಿ, ಕೇವಲ ನಾಲ್ಕು ಜನರ ಒಂದು ಸಂಸಾರ ವಾಸ ಮಾಡಬಹುದಾದರೆ ಅಂತಹವರು ಉದಾರ ಮನಸ್ಸಿನಿಂದ ಇನ್ನಷ್ಟು ಜನಸಾಮಾನ್ಯರಿಗೆ ವಸತಿ ಕಲ್ಪಿಸಿಕೊಡಬಹುದಲ್ಲವೇ? ಅವರ ಮನಸ್ಸನ್ನು ಮಾರ್ಪಾಟು ಮಾಡುವುದು ಹೇಗೆ?
 
ಅಂತಹವರು ರಾಜಕಾರಣಿಗಳಿಗೆ ಸಹಾಯ ಮಾಡುವ ಸಲುವಾಗಿ ಖರ್ಚು ಮಾಡುವ ಮೊತ್ತದಲ್ಲಿ ಶೇ 10 ರಷ್ಟನ್ನು ದಾನ– ಧರ್ಮಗಳಿಗೆ ಉಪಯೋಗಿಸಿದರೆ ಸಾಕು. ನಮ್ಮ ದೇಶದ ವಸತಿ ಬಡತನ ನೀಗುತ್ತದೆ.
ಜಿ.ಎಸ್‌. ನಾರಾಯಣನ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.