ADVERTISEMENT

ಅಭಿವೃದ್ಧಿ ಗುರಿಯಾಗಲಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ನಮ್ಮ ರಾಜಕೀಯ ಪಕ್ಷಗಳಿಗೆ ಹಗರಣಗಳ ಬಗ್ಗೆ ಮಾತನಾಡುವುದೇ ಮುಖ್ಯವಾಗಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಯಾರಿಗೂ ಬೇಡವಾಗಿದೆ. ಹಗರಣಗಳು, ಹತ್ಯೆಗಳು, ಪ್ರತ್ಯೇಕ ಧರ್ಮದ ಬೇಡಿಕೆ... ಇಂಥ ವಿಷಯಗಳ ಮೂಲಕವೇ ರಾಜಕೀಯ ಪಕ್ಷಗಳು ಗುರುತಿಸಿಕೊಳ್ಳುತ್ತಿವೆ.

ಗ್ರಾಮಾಭಿವೃದ್ಧಿ, ಜನಪರ ಯೋಜನೆಗಳ ಅನುಷ್ಠಾನ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಸಮರ್ಪಕ ಬಳಕೆಯಂಥ ವಿಚಾರಗಳತ್ತ ಯಾರೂ ಗಮನ ಹರಿಸುತ್ತಿಲ್ಲ. ಗ್ರಾಮವಿಕಾಸದ ಕಲ್ಪನೆಯೇ ಮೂಲೆಗುಂಪಾಗಿದೆ.

ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿವೆ. ಈಗ ಕೆಲವು ನಾಯಕರು ಸ್ವಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಇವರು ಏನು ಮಾಡಲೂ ಸಿದ್ಧ ಎಂಬುದನ್ನು ಇದು ಸೂಚಿಸುವುದಿಲ್ಲವೇ?

ADVERTISEMENT

ಮತದಾರರು ಮುಂದಿನ ಚುನಾವಣೆಯಲ್ಲಾದರೂ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿರುವವರನ್ನೇ ಆರಿಸಲಿ.
–ಮಿಥುನ್ ಪಿ.ಜಿ., ಉಜಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.