ADVERTISEMENT

ಆಕಾಶಗಂಗೆ ಕಡೆ ನೋಡಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST

‘ಪಾತಾಳಗಂಗೆ’ ಯೋಜನೆಗೆ ಬಳಸಲು ಉದ್ದೇಶಿಸಿರುವ ಹಣವನ್ನು ಮಳೆ ನೀರು ಸಂಗ್ರಹಕ್ಕೆ ಬಳಸಿದರೆ ನೀರ ನೆಮ್ಮದಿ ಸಾಧ್ಯ. ಹನಿ ಮತ್ತು ತುಂತುರು ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಸಿಗಲಿ. ಕೆರೆಗಳ ಪುನರುಜ್ಜೀವನದಂಥ ಸರಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ನೀರಿನ ಸಂಕಟ ಸ್ವಲ್ಪವಾದರೂ ನಿವಾರಣೆ ಆದೀತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಪಾತಾಳಕ್ಕೆ ಇಳಿಯುವ ಬದಲು ಆಕಾಶಗಂಗೆಯನ್ನು (ಮಳೆನೀರು) ಶಿವನಂತೆ ಶಿರದಲಿ ಧರಿಸಲಿ.
–ಸುನೀಲ ಸಾಣಿಕೊಪ್ಪ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.