ADVERTISEMENT

ಆತ್ಮಹತ್ಯೆ ಪರಿಹಾರವಲ್ಲ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ದಲಿತ ವಿದ್ಯಾರ್ಥಿಯೊಬ್ಬರು ಸೋಮವಾರ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ನೋವಿನ ಸಂಗತಿ. ಆದರೆ, ಪ್ರಜ್ಞಾವಂತ ಯುವಕರು ಇಂತಹ ಕೃತ್ಯಕ್ಕೆ ಮುಂದಾಗುವುದರಿಂದ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ತ್ಯಾಗ, ಹೋರಾಟದ ವಿಚಾರಗಳಿಗೆ ಧಕ್ಕೆ ಉಂಟು ಮಾಡಿದಂತಾಗುತ್ತದೆ.

‘ನಾವು ದೌರ್ಜನ್ಯಕೋರರ ಮುಂದೆ ಮಂಡಿಯೂರಿ ದೀನಭಾವದಿಂದ ಪ್ರಾರ್ಥಿಸಿಕೊಳ್ಳುವುದರಿಂದ, ಕಳೆದುಕೊಂಡ ಹಕ್ಕುಗಳನ್ನು ಮರಳಿ ಗಳಿಸುವುದು ಅಸಾಧ್ಯ. ಜನರು ಮೇಕೆಗಳನ್ನು ಬಲಿ ಕೊಡುತ್ತಾರೆ ಹೊರತು ಹುಲಿಗಳನ್ನಲ್ಲ’ ಎಂಬ ಮಾತನ್ನು ಬಾಬಾಸಾಹೇಬರು ಆಡಿದ್ದರು. ಇಂತಹ ಆತ್ಮವಿಶ್ವಾಸದ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು  ಹೋರಾಟ ಮುಂದುವರಿಸಬೇಕು. ‘ಇಲ್ಲಿ ಈಸಬೇಕು, ಇದ್ದು ಜೈಸಬೇಕು’ ಎಂಬ ದಾಸರ ನುಡಿಯಂತೆ, ಆಶಾವಾದಿಗಳಾಗಿ ಬಾಬಾಸಾಹೇಬರ ಚಿಂತನೆಯ ಹಾದಿಯಲ್ಲಿ ಸಾಗಬೇಕು.  ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ.
-ಡಾ. ಸಂದೀಪ್ ಕುಮಾರ ಕೆ.ಸಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT