ADVERTISEMENT

ಆರೋಪಕ್ಕೆ ಸೀಮಿತ?

ಸುಭಾಸ ಯಾದವಾಡ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರವನ್ನು ‘ಕಮಿಷನ್ ಸರ್ಕಾರ’ ಎಂದು ಜರೆದಿದ್ದಾರೆ. ಈ ಸರ್ಕಾರ ಎಲ್ಲ ಯೋಜನೆಗಳಲ್ಲೂ ಶೇ 10ರಷ್ಟು ಲಂಚ ಹೊಡೆಯುತ್ತಿದೆಯಂತೆ! ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೇಂದ್ರದಲ್ಲಿರುವುದು ಶೇ 90ರಷ್ಟು ಕಮಿಷನ್‌ ಸರ್ಕಾರ’ ಎಂದಿದ್ದಾರೆ. ಇವು ಕೇವಲ ಮಾತಿನ ಚಕಮಕಿ. ಇಬ್ಬರೂ ತಮ್ಮ ಆರೋಪಗಳಿಗೆ ಯಾವುದೇ ಆಧಾರ, ದಾಖಲೆಗಳನ್ನು ಕೊಟ್ಟಿಲ್ಲ.

ಇಬ್ಬರೂ ನಿಜವನ್ನೇ ಹೇಳುತ್ತಿದ್ದರೆ, ಎರಡೂ ಸರ್ಕಾರಗಳು ಭ್ರಷ್ಟ ಎಂದಂತಾಯಿತು! ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಇರುವುದು ಸುಳ್ಳಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಅದರ ಅನುಭವವಾಗಿದೆ. ಏನೆಲ್ಲ ಕಾನೂನು ರೂಪಿಸಿದರೂ ಲಂಚವನ್ನು ತಡೆಯಲಾಗಿಲ್ಲ.

ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಎಂಬ ಕಾಳಜಿ ಇಬ್ಬರಲ್ಲೂ ಇದೆಯೇ ಅಥವಾ ಭ್ರಷ್ಟಾಚಾರ ತಡೆ ಎಂಬುದು ಪರಸ್ಪರರ ನಿಂದನೆಗೆ ಮಾತ್ರ ಸೀಮಿತವೇ ಎಂಬುದು ಸ್ಪಷ್ಟವಾಗಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.