ADVERTISEMENT

ಆರ್‌.ಡಿಗೆ ತೆರಿಗೆ ಬೇಡ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:16 IST
Last Updated 24 ಮಾರ್ಚ್ 2017, 19:16 IST

ಫೆಬ್ರುವರಿ ತಿಂಗಳಿನಲ್ಲಿ ಬ್ಯಾಂಕಿಗೆ ಹೋದಾಗ ಆರ್‌.ಡಿ. ಖಾತೆ ಇರುವವರು 15ಎಚ್‌ ಫಾರಂ ಕೊಡಬೇಕು ಎಂದು ತಿಳಿಯಿತು. ನಮ್ಮಂಥ ಪಿಂಚಣಿದಾರರು ಏನೋ ಕಷ್ಟದಿಂದಲಾದರೂ ಆರ್‌.ಡಿ.ಯಲ್ಲಿ ಉಳಿತಾಯಕ್ಕೆ ಪ್ರಯತ್ನಿಸಿದರೆ ಅದಕ್ಕೂ ತೆರಿಗೆ ಕೊಡಬೇಕು ಎಂಬುದು ನ್ಯಾಯವೇ?
ವಾರ್ಷಿಕ ಆದಾಯವನ್ನು ತೋರಿಸಿ ತೆರಿಗೆ ಕಟ್ಟುವ ಪಿಂಚಣಿದಾರರಾದ (ಕಚೇರಿಯಲ್ಲಿಯೇ ತೆರಿಗೆ ಹಿಡಿದಿರುತ್ತಾರೆ) ನಾವು ತೆರಿಗೆಯನ್ನು ಕೊಟ್ಟು ಆರ್‌.ಡಿ.ಗೆ ಹಣ ಹಾಕುತ್ತೇವೆ. ಇದರಲ್ಲಿ ತೊಡಗಿಸುವ ಹಣವನ್ನೂ ಸೇರಿಸಿಯೇ ತೆರಿಗೆ ಕೊಟ್ಟಿರುತ್ತೇವೆ. ಆದರೂ ಆರ್‌.ಡಿ.ಯಿಂದ ಬರುವ ಅಲ್ಪ ಬಡ್ಡಿಗೂ 10% ತೆರಿಗೆ ಹಾಕಿದರೆ ನಾವೇನು ಉಳಿಸುವುದು? ಸಾಲ ಕೊಡುತ್ತಿದ್ದ ಯಹೂದಿ ಸಾಹುಕಾರರಿಗಿಂತ ಕಠೋರವಾಯಿತೇ ಸರ್ಕಾರ? ಈ ನಿಯಮವನ್ನು ಕೈಬಿಡಿ.
ಚಿಕ್ಕಸಿದ್ದಯ್ಯ,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.