ADVERTISEMENT

ಇದು ಸೂಕ್ತವೇ?

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ಪ್ರಾಥಮಿಕ ಶಾಲಾ ಮಕ್ಕಳಿಗೆ ಮನೆಗೆ ಪ್ರಾಜೆಕ್ಟ್ ಕೆಲಸಗಳನ್ನು ಕೊಡಬಾರದು, ಪ್ರಾಜೆಕ್ಟ್ ಕೆಲಸ ಮಕ್ಕಳ ಬದಲು ಪಾಲಕರಿಗೆ ಎಂಬಂತಾಗಿದೆ. ಪ್ರಾಜೆಕ್ಟ್ ಕೆಲಸಗಳನ್ನು ಮಾಡಲು ಮಕ್ಕಳಿಗೆ ಶಿಕ್ಷಕರೇ ತರಗತಿಗಳಲ್ಲಿ ಸಹಾಯ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ಅವರು ಹೇಳಿರುವುದು ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ನಾನೊಂದು ಪುಸ್ತಕ ಅಂಗಡಿಯ ಮಾಲೀಕ. ಪ್ರತಿದಿನ ಹತ್ತಾರು ಪಾಲಕರು ನನ್ನ ಅಂಗಡಿಗೆ ಬಂದು ಈ ಪ್ರಾಜೆಕ್ಟ್‌ಗಳ ವಿಷಯವಾಗಿ ತಮ್ಮ ಆತಂಕವನ್ನು ಹೇಳಿಕೊಳ್ಳುತ್ತಿರುತ್ತಾರೆ.

ಮಕ್ಕಳಿಗೆ ಆಯಾ ತರಗತಿಗೆ ಅನುಗುಣವಾಗಿ ಶಾಲೆಯವರು ಪ್ರಾಜೆಕ್ಟ್, ಅಸೈನ್‌ಮೆಂಟ್ ಕೆಲಸ ವಹಿಸುತ್ತಾರಷ್ಟೇ! ಈ ಕೆಲಸಗಳು ಮಕ್ಕಳಿಗೆ ಬಿಡಿ, ಪಾಲಕರಿಗೂ ಮಾಡಲು ಬಾರದಷ್ಟು ಭಾರವಾಗಿರುತ್ತವೆ.

ADVERTISEMENT

ಕೆಲವು ಪರಿಕರಗಳು ಮಾರುಕಟ್ಟೆಯಲ್ಲಿ ಲಭ್ಯವಿರದೇ ಇರಬಹುದು. ಈ ಬಗೆಯ ಪ್ರಾಜೆಕ್ಟ್ ಕೆಲಸಗಳನ್ನು ಮಕ್ಕಳಿಗೆ ವಹಿಸುವುದು ಸೂಕ್ತ ಅಲ್ಲ ಅಂತ ಅನುಭವೀ ಶಿಕ್ಷಕರು ಸಹ ಹೇಳುತ್ತಾರೆ. ಶೈಕ್ಷಣಿಕವಾಗಿ ಇಂತಹ ಕೆಲಸಗಳಿಂದ ಮಕ್ಕಳ ಹಿತಾಸಕ್ತಿ ಒತ್ತಟ್ಟಿಗಿರಲಿ, ಅದರಿಂದ ಪಾಲಕರಿಗಾಗುವ ಕಿರಿಕಿರಿ ಅಷ್ಟಿಷ್ಟಲ್ಲ.

ಅಮರನಾಥ ಭೂತೆ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.