ADVERTISEMENT

ಇದೆಂಥ ‘ಶಾಪ’?

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST

ಅತ್ಯಾಚಾರ ಆರೋಪಿಗಳಿಗೆ ಮೃಗೀಯವಾಗಿ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಹೇಳಿದ್ದಾರೆ. ಅವರು ಹೆಣ್ಣಷ್ಟೇ ಅಲ್ಲ ಸನ್ಯಾಸಿನಿ; ಮೇಲಾಗಿ ಕೇಂದ್ರ ಸಚಿವೆ. ಮಾರಮ್ಮನ ಗುಡಿ ಪೂಜಾರಿಣಿ ತನ್ನ ಸಹಚರರೊಂದಿಗೆ ಹೀಗೆಲ್ಲಾ ಮಾತನಾಡಿಕೊಂಡಾಳು. ಆದರೆ ಸಚಿವೆಯ ಮಾತು ‘ಸುತ್ತೋಲೆ’ಯೇ ಆಗಿ ಹೊರಬಂದುಬಿಟ್ಟರೇನು ಗತಿ?

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ವೋಟಿನ ವಿಚಾರ ಮಾಡಿಕೊಳ್ಳುವುದು ನೈತಿಕ ಅಧಃಪತನ. ಆದರೆ ಸಮಾಜಕ್ಕೆ ತಾಳ್ಮೆ, ಸತ್ಯಶೋಧದ ಪಾಠ ಹೇಳಬೇಕಾದ ಸನ್ಯಾಸಿನಿ, ಅನ್ಯಾಯಕ್ಕೊಳಗಾದ ನಿಸ್ಸಹಾಯಕ ಕುಡುಕನೊಬ್ಬ ತೂರಾಡುತ್ತ ಹಾದಿ ಬೀದಿಯಲ್ಲಿ ಶಾಪ ಹಾಕುವಂತೆ ಮಾತನಾಡುವುದು ಸಾಮಾಜಿಕ ಆರೋಗ್ಯವನ್ನು ಸೂಚಿಸುವುದಿಲ್ಲ.    
-ಆರ್.ಕೆ.ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.