ADVERTISEMENT

ಇದೇನಾ ಆದರ್ಶ?

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ದೆಹಲಿಯಲ್ಲಿ ಸರ್ಕಾರದ ವತಿಯಿಂದ ತಮಗೆ ಹಂಚಿಕೆಯಾದ ಬಂಗಲೆಗಳ ನೀರಿನ ಬಿಲ್, ವಿದ್ಯುತ್‌ ಬಿಲ್‌, ಫೋನ್‌ ಬಿಲ್‌ಗಳನ್ನು  ಸಕಾಲಕ್ಕೆ ಪಾವತಿಸದೆ, ಭಾರಿ ಬಾಕಿ ಉಳಿಸಿಕೊಂಡಿರುವ, ‘ನಾಯಕಮಣಿ’

ಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ.  ದೇಶದ ಈ ಹಿರಿಯರು (?) ಎಂಥ ಆದರ್ಶಗಳನ್ನು ನಮ್ಮ ಮುಂದೆ ಇಡುತ್ತಿದ್ದಾರೆ? ಈ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಎಚ್.ಡಿ. ದೇವೇಗೌಡ,  ಎಲ್. ಕೆ. ಅಡ್ವಾಣಿ, ರಾಮ್ ವಿಲಾಸ್ ಪಾಸ್ವಾನ್ ಇತ್ಯಾದಿ ರಾಷ್ಟ್ರೀಯ ಮುಖಂಡರ ಹೆಸರಿದೆ.

ಇಂಥ ‘ದೊಡ್ಡ’ವರಿಗಿಂತ ಪ್ರಾಮಾಣಿಕವಾಗಿ ಬಿಲ್ ಕಟ್ಟುವ ‘ಸಣ್ಣ’ ಪ್ರಜೆಗಳೇ ವಾಸಿ ಅಲ್ಲವೇ?
ವಿವಿಧ ರೂಪದ ಭತ್ಯೆಗಳ ಮೂಲಕ ಸರ್ಕಾರವೇ ಇವರಿಗೆ ಕೈತುಂಬಾ ಹಣ ಕೊಡುತ್ತದೆ. ಇಂಥವರಿಗೆ ಭತ್ಯೆ ಕೊಡುವ ಬದಲು, ಸರ್ಕಾರವೇ ನೇರವಾಗಿ ಈ ಬಿಲ್‌ಗಳನ್ನು  ತುಂಬುವುದು ಉತ್ತಮ ಅಲ್ಲವೇ?
ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.