ADVERTISEMENT

ಉತ್ತಮ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಶಿಕ್ಷಕರ ನೇರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಸಭೆ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಬಿ.ಇಡಿ ಮತ್ತು ಟಿಇಟಿ ಪರೀಕ್ಷೆಯ ಮಾನದಂಡದೊಂದಿಗೆ ನೇರ ನೇಮಕಾತಿ ಮಾಡುವುದರಿಂದ ನೇಮಕಾತಿಯಲ್ಲಿ ಆಗುವ ವಿಳಂಬವನ್ನು ತಪ್ಪಿಸಬಹುದು.
 
ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದೆ.  ಇದರಿಂದಾಗಿ  ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗಳ ಸಬಲೀಕರಣ ಇಂದಿನ ತುರ್ತು ಅಗತ್ಯ. ಅದಕ್ಕಾಗಿ ಶಿಕ್ಷಕರ ಕೊರತೆ ನೀಗುವ ಕ್ರಮ ಶ್ಲಾಘನೀಯ.
ಪೂಜಾ ಜೈನ್‌, ನರಸಿಂಹರಾಜಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.