ADVERTISEMENT

ಉದ್ಯಾನ ಸ್ವಚ್ಛಗೊಳಿಸಿ

ಎಸ್‌.ಆರ್‌.ಗಡಿಚೆರ್ಲಾ, ಜಯನಗರ ಮೊದಲನೇ ಹಂತ
Published 9 ಫೆಬ್ರುವರಿ 2015, 19:30 IST
Last Updated 9 ಫೆಬ್ರುವರಿ 2015, 19:30 IST

ಜಯನಗರ ಮೊದಲನೇ ಹಂತದಲ್ಲಿನ ಮಾಧವನ್‌ ಪಾರ್ಕ್‌ನ ಪೂರ್ವಭಾಗವು ಪೂರ್ತಿ ತಿಪ್ಪೆಗುಂಡಿಯಾಗಿ ಬದಲಾಗಿದೆ. ಸ್ಥಳೀಯ ನಿವಾಸಿಗಳು ಕಸವನ್ನೆಲ್ಲ ಇಲ್ಲಿಯೇ ಎಸೆಯುತ್ತಿರುವುದರಿಂದ ಪಾರ್ಕ್‌ನ ಪೂರ್ವಭಾಗ ಪೂರ್ತಿಯಾಗಿ ಅಂದಗೆಟ್ಟು ವಿರೂಪಗೊಂಡಿದೆ.

ಇತ್ತೀಚೆಗೆ ಕೆಲವು ಸಂಸ್ಥೆಗಳು ಸ್ವಚ್ಛಭಾರತ್‌ ಆಂದೋಲನದ ಅಂಗವಾಗಿ ಈ ಭಾಗದಲ್ಲಿ ಕಸವನ್ನು ಚೆಲ್ಲದಂತೆ ಸ್ಥಳೀಯರಿಗೆ ಅರಿವು ಮೂಡಿಸಿರುವುದೂ ಅಲ್ಲದೇ ಅಲ್ಲಿ ಈ ಕುರಿತು ಫಲಕವನ್ನೂ ಹಚ್ಚಿದ್ದಾರೆ. ಆದರೆ ಇದರಿಂದ ಕಸವನ್ನು ಚೆಲ್ಲುವುದು ನಿಂತಿದ್ದರೂ ಹಿಂದೆ ಚೆಲ್ಲಿದ್ದ ಕಸ ಹಾಗೆಯೇ ಉಳಿಸಿದೆ. ಆದ್ದರಿಂದ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸಿ ಅಲ್ಲಿನ ಕಸವನ್ನು ಸರಿಯಾದ ಸ್ಥಳಕ್ಕೆ ವಿಲೇವಾರಿ ಮಾಡಿಸಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.