ADVERTISEMENT

ಐತಿಹಾಸಿಕ ನೋಟ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST

ಪದ್ಮರಾಜ ದಂಡಾವತಿ ಅವರ ‘ಹಿಂದಿ ಹೇರಿಕೆಯ ಹಿಂದೆ ಮುಂದೆ...’ ಲೇಖನದಲ್ಲಿ (ಪ್ರ.ವಾ., ನಾಲ್ಕನೇ ಆಯಾಮ, ಜುಲೈ 9), ಹಿಂದಿ ಹೇರಿಕೆಯ ಒಂದು ಐತಿಹಾಸಿಕ ನೋಟ ಅನಾವರಣಗೊಂಡಿದೆ. ದಕ್ಷಿಣದ ನಾಲ್ಕು ರಾಜ್ಯಗಳಿಗೆ ಹಿಂದಿ ಏಕೆ ಬೇಕು ಎಂಬುದೇ ಬಹಳ ಮುಖ್ಯವಾದ ಪ್ರಶ್ನೆ. ಹಿಂದಿ ಹೇರಿಕೆಯಿಂದಾಗಿ ಈ ನಾಲ್ಕೂ (ಕರ್ನಾಟಕ, ಕೇರಳ, ತಮಿಳುನಾಡು,ಅವಿಭಜಿತ ಆಂಧ್ರ ಪ್ರದೇಶ) ರಾಜ್ಯಗಳ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿರುವುದು ನಿಚ್ಚಳವಾಗಿದೆ.
ಉತ್ತರ ಭಾರತದಲ್ಲಿ ಹಿಂದಿ ಮಾತೃಭಾಷೆ ಹಾಗೇನೇ ಪ್ರಾದೇಶಿಕ ಭಾಷೆಯೂ ಆಗಿರುವುದರಿಂದ ಅಲ್ಲಿ ದ್ವಿಭಾಷಾ ಸೂತ್ರವೇ ಜಾರಿಯಲ್ಲಿದ್ದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಾಗಿದೆ. ಶಿಕ್ಷಣ–ಉದ್ಯೋಗ... ಹೀಗೆ ನಮ್ಮ ದೇಶವಾಸಿಗಳ ಬದುಕಿನ ಪ್ರಶ್ನೆಯೂ ಇಲ್ಲಿ ಅಡಗಿದೆಯಾದ್ದರಿಂದ ತ್ರಿಭಾಷಾ ಸೂತ್ರದ ನೆಪದಲ್ಲಿ ಹಿಂದಿ ಹೇರಿ ನಮ್ಮ ಉದ್ಯೋಗಾವಕಾಶವನ್ನೇ ಕಸಿದುಕೊಳ್ಳಲಾಗುತ್ತಿದೆ. ಇದು ಇಂದಲ್ಲ ನಾಳೆ ನಮ್ಮ ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರಲಿದೆ.                                                  
 
-ಹುರುಕಡ್ಲಿ ಶಿವಕುಮಾರ

ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT