ADVERTISEMENT

ಒಳ್ಳೆಯ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡುವ ಸರ್ಕಾರದ ತೀರ್ಮಾನ ಕನ್ನಡಿಗರೆಲ್ಲರಿಗೂ ಸಂತಸ ತರುವ ವಿಷಯ. ಹೊರರಾಜ್ಯಗಳಿಂದ ವಲಸೆ ಬಂದು, ಇಲ್ಲಿಯ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಹಾಗೂ ಕರ್ನಾಟಕ ರಾಜ್ಯದಲ್ಲೇ ಓದುತ್ತಿರುವ ಎಲ್ಲಾ ಪಠ್ಯಕ್ರಮಗಳ (ರಾಜ್ಯ, ಸಿಬಿಎಸ್‌ಇ, ಐಸಿಎಸ್‌ಇ) ಮಕ್ಕಳಿಗೂ ಇದು ಅನ್ವಯವಾದಲ್ಲಿ ಕನ್ನಡ ಭಾಷೆಗೆ, ಕನ್ನಡ ಶಿಕ್ಷಕ–ಶಿಕ್ಷಕಿಯರಿಗೆ ಮಹತ್ವದ ಸ್ಥಾನ, ಗೌರವ ಕೊಟ್ಟಂತಾಗುತ್ತದೆ.

ಹಾಗೆಯೇ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಕೆಲಸವೂ ಆಗಬೇಕು. ಆಗಮಾತ್ರ ಕನ್ನಡ ಭಾಷೆ ಉಳಿದು–ಬೆಳೆಯಲು ಸಾಧ್ಯ.
ಮನೋರಮ, ಗೊಟ್ಟಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT