ADVERTISEMENT

ಒಳ್ಳೆಯ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಕೊಚ್ಚಿ ಮೆಟ್ರೊ ರೈಲು ನಿಗಮವು 23 ಮಂದಿ ತೃತೀಯ ಲಿಂಗಿಗಳಿಗೆ  ಉದ್ಯೋಗ ನೀಡಲು ಮುಂದಾಗಿರುವ ಸುದ್ದಿ ಓದಿ ಸಂತೋಷವಾಯಿತು. ಎಲ್‌ಜಿಬಿಟಿ (LGBT) ಎಂದು ಗುರುತಿಸಿಕೊಳ್ಳುವ ಈ ಸಮುದಾಯ, ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ.
 
ಕೊಚ್ಚಿ ಮೆಟ್ರೊ ರೈಲು ನಿಗಮ ಅವರಿಗೂ ಗೌರವಯುತ ಬದುಕಿಗೆ ಅವಕಾಶ ಮಾಡುವ ಕಾರ್ಯಕ್ಕೆ ಮುಂದಾಗಿ ಆ ಸಮುದಾಯದವರಲ್ಲಿ ಭರವಸೆಯನ್ನು ಹೆಚ್ಚಿಸಿದೆ.
 
ಕೇರಳದ ಇನ್ನಷ್ಟು ಸರ್ಕಾರಿ ಸಂಸ್ಥೆಗಳು ಆ ಸಮುದಾಯದವರಿಗೆ ಅವಕಾಶಗಳನ್ನು ನೀಡಲಿವೆ ಎಂಬ ಭರವಸೆಯನ್ನು ಸಹ ರೈಲ್ವೆ ನಿಗಮದ ಅಧಿಕಾರಿ ಇಲಿಯಾಸ್ ಜಾರ್ಜ್ ಅವರು ವ್ಯಕ್ತಪಡಿಸಿದ್ದಾರೆ. ಅವರು ಅಭಿನಂದನಾರ್ಹರು.
ಚಂದ್ರಾಚಾರಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.