ADVERTISEMENT

‘ಓಬವ್ವ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST

‘ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿ’ (ಪ್ರ.ವಾ., ಮೈಸೂರು ನ.2). ಸ್ವಾರಸ್ಯಕರ ಸಚಿತ್ರ ಸುದ್ದಿ. ಆ ‘ಓಬವ್ವಗಳು’ ಒನಕೆಗಳನ್ನು ಯಾರ  ಮೇಲೆ ಪ್ರಯೋಗಿಸಲಿದ್ದರು? ಟಿಪ್ಪುವಂತೂ ಇಲ್ಲ! ಆದರೆ ಒಮ್ಮೆ ಆಯುಧವನ್ನು ಹೊರದೆಗೆದ ಮೇಲೆ ಅದನ್ನು ಯಾರ ಮೇಲಾದರೂ ಪ್ರಯೋಗಿಸಲೇ ಬೇಕು, ಇಲ್ಲದಿದ್ದರೆ ಒಳ್ಳೆಯದಾಗುವುದಿಲ್ಲ ಎಂಬ ನಂಬಿಕೆಯೊಂದುಂಟು. ಆದ್ದರಿಂದ ಆ ವೀರವನಿತೆಯರು ಒನಕೆಗಳನ್ನು ತಮ್ಮ ತಮ್ಮ ಪತಿಮಹಾಶಯರ ಮೇಲೆಯೇ ಪ್ರಯೋಗಿಸಬಹುದಲ್ಲ! (ಅದಕ್ಕಾಗಿ ನಾನಾ ಕಾರಣಗಳಿದ್ದಾವು) ಒನಕೆಯ ಸದುಪಯೋಗವೂ ಆಯಿತು, ಸತಿ– ಪ್ರತೀಕಾರವೂ ಆಯಿತು!
–ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.