ADVERTISEMENT

ಔಷಧಿ ನಿಯಂತ್ರಣ ತ್ರಾಣವೆಲ್ಲಿದೆ?

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2014, 19:30 IST
Last Updated 31 ಆಗಸ್ಟ್ 2014, 19:30 IST

ಔಷಧಿ ನಿಯಂತ್ರಣ ಒಂದು ದೊಡ್ಡ ಸವಾಲೆ ಸರಿ. ವೈದ್ಯರ ಚೀಟಿಯಿಲ್ಲದೆ ಔಷಧ ಕೊಟ್ಟರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಎನ್ನುವರು ಆರೋಗ್ಯ ಸಚಿವರು. ಇದೇನೋ ಆಶಾದಾಯಕ ಬೆಳವಣಿಗೆ. ಪ್ರತೀ ಗ್ರಾಮದಲ್ಲಿ ಕಿರಾಣಿ ಅಂಗಡಿಯಲ್ಲಿ ಸಕ್ಕರೆ, ಬೆಲ್ಲದಂತೆ ಔಷಧಿಗಳು ಮಾರಾಟ­ವಾಗುತ್ತಿವೆ.

ಪಾಪ ಮುಗ್ಧ ರೋಗಿ ಅವಸರಕ್ಕೆ ಸಿಕ್ಕಿದವರನ್ನೆ ಧನ್ವಂತರಿ ಎಂದು ಕೈಗೆ ಸಿಕ್ಕ ಮಾತ್ರೆ ನುಂಗಿ ತೆಪ್ಪಾ­ಗಾ­ಗುತ್ತಾರೆ. ಅವರಿಗೆ ಕಾನೂನು ಪಾಠ ಹೇಳೋರು ಯಾರು?  ಇನ್ನು ಔಷಧದ ಅಂಗಡಿ­ಯಲ್ಲಿ ಸ್ವತಃ ಔಷಧ ನಿಯಂತ್ರಕರೇ ಹೋಗಿ, ‘ಜ್ವರದ ಮಾತ್ರೆ ಎರಡು  ಕೊಡಪ್ಪ’ ಎಂದ್ರೆ ತಡಮಾಡದೆ ಅಂಗಡಿ­ಯವನೇ ‘ನೆಗಡಿ ಕೆಮ್ಮು ಇದೆಯಾ’ ಎಂಬು­ದಾಗಿ ಕೇಳಿ ಮೂರು ಥರ ಮಾತ್ರೆ ಕೊಟ್ಟ ನುಂಗುವ ವಿಧಾನ ಹೇಳಿ, ಪುಕ್ಕಟ್ಟೆ ಪಥ್ಯ ಹೇಳಿ ಕಳಿಸುವ ಪರಿಸ್ಥಿತಿ ಇರುವಾಗ ಕಾನೂನಿಗೆ ಗೌರವ ಎಲ್ಲಿಂದ ಬಂತು? ಅಧಿಕಾರಿ, ಅಂಗಡಿ ಮಾಲೀಕ ಮತ್ತು ರೋಗಿಗೆ  ಅರಿವಿನ  ಜತೆ ಕಾನೂನಿನ ಬಗ್ಗೆ ಗೌರ­­ವ­­­ವಿದ್ದರೆ ಮಾತ್ರ ಪರಿಸ್ಥಿತಿ ನಿಯಂತ್ರಿಸ­ಬಹುದು.

ಚಾಕೊಲೆಟ್‌ ಮಾರಿದಂತೆ ಔಷಧ ಮಾರಾಟ ಮಾಡುವವರ   ಪರವಾ­ನಗಿ ರದ್ದು ಮಾಡಬೇಕು. ಅಂತಹವರ ವಿರುದ್ಧ ಜನರೇ ಕೇಸ್ ದಾಖಲು ಮಾಡುವ ಅವಕಾಶ ಕಲ್ಪಿ­ಸಿ­ದಾಗ ಮಾತ್ರ  ಔಷಧ ಮಾರಾಟ ನಿಯಂತ್ರಣ ಸಾಧ್ಯ. 
     –ಡಾ.ನಾಗೇಂದ್ರ, ಮಲ್ಲಾಡಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.