ADVERTISEMENT

ಕಡಿತಲೆ ತಪ್ಪಿಸಿ

ಶಾರದಾರಮ್ಯ ವಿ.ಎಸ್., ಶೃಂಗೇರಿ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST

ಸರ್ಕಾರದ ಹೊಸ ನಿಯಮದ ಅನ್ವಯ ಮಾವು, ಅಂಟುವಾಳ ಮುಂತಾದ ಮರಗಳು ಹಿಡುವಳಿ ಜಾಗದಲ್ಲಿದ್ದರೆ ಅವನ್ನು ಕಡಿತಲೆ ಮಾಡಲು ಯಾವುದೇ ಪರವಾನಗಿ ಬೇಕಿಲ್ಲ.

ಹೀಗಾಗಿ ಅಡಿಕೆ ಕೊಳೆರೋಗ, ಬೆಳೆಹಾನಿಗಳಿಂದ ಬೇಸತ್ತಿರುವ  ಮಲೆನಾಡಿನ ಕೆಲವು ರೈತರು ತಮ್ಮ ಹಿಡುವಳಿ ಮಾತ್ರವಲ್ಲದೆ ಜಮೀನಿಗೆ ಹೊಂದಿಕೊಂಡ  ಕಾಡಿನಲ್ಲಿರುವ ನೂರಾರು ವರ್ಷ ಹಳೆಯ ಅಪ್ಪೆಮಿಡಿ ಮುಂತಾದ ದೇಸಿ ತಳಿಯ ಮರಗಳನ್ನು ಮರದ ವ್ಯಾಪಾರಿಗಳು ನೀಡುವ ಪುಡಿಗಾಸಿನ ಆಸೆಗಾಗಿ ಬುಡಸಮೇತ (ಬರೀ ಕಡಿತಲೆ ಅಲ್ಲ) ಸಾಮೂಹಿಕವಾಗಿ ಉರುಳಿಸುತ್ತಿದ್ದಾರೆ.

ಇತ್ತೀಚೆಗೆ ನಮ್ಮ ಪರಿಚಯದವರ ಒಂದು ಎಕರೆ ಜಮೀನಿನಲ್ಲಿ ಕೇವಲ ಇಪ್ಪತ್ತು ಸಾವಿರ ರೂಪಾಯಿಗೆ 100 ವರ್ಷಕ್ಕೂ ಹಳೆಯ ಐದು ಮಾವಿನ ಮರಗಳನ್ನು ಬುಡಸಮೇತ ಕಡಿಯಲಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಆದೇಶವನ್ನು ಹಿಂಪಡೆಯದಿದ್ದಲ್ಲಿ ಅಶೋಕ ವೃಕ್ಷದಂತೆ ದೇಸಿ ತಳಿಯ ಮಾವಿನ ಮರಗಳೂ ಅಳಿವಿನ ಅಂಚಿಗೆ ತಲುಪಲಿವೆ. ವೃಕ್ಷ ಸಂಪತ್ತು ಕ್ಷೀಣಿಸಿ ಮೊದಲೇ ಕವಿದಿರುವ ಬರದ ಪರಿಸ್ಥಿತಿ ಇನ್ನಷ್ಟು ಹೆಚ್ಚಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.