ADVERTISEMENT

ಕಡ್ಡಾಯದ ‘ಭಾಗ್ಯ’

ಲಾವಣ್ಯಗೌರಿ ವೆಂಕಟೇಶ್
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

‘ಜನವರಿಯಿಂದಲೇ ಎಲ್‌ಇಡಿ ಕಡ್ಡಾಯ’ (ಪ್ರ.ವಾ., ಅ. 6). ಆಹಾ! ಇಂಧನ ಸಚಿವರಿಂದ ಎಂತಹ ಹೇಳಿಕೆ? ರೀ ಸ್ವಾಮೀ, ಮೊದಲು ವಿದ್ಯುತ್‌ ಒದಗಿಸಿ ನಂತರ ಬಲ್ಬ್ ವಿತರಣೆ ಬಗ್ಗೆ ಗಮನಹರಿಸಿ. ಯು.ಪಿ.ಎಸ್. ನೆರವಿನಿಂದ ಎ.ಸಿ. ಕೋಣೆಯಲ್ಲಿ  ಕುಳಿತು ಒಂದಾದ ಮೇಲೊಂದರಂತೆ ಯೋಜನೆಗಳನ್ನು ತರುತ್ತೇವೆಂದು ಹೇಳಿಕೆಗಳನ್ನು ಕೊಡುವುದು ಸುಲಭ. ಅವು ಕಾರ್ಯರೂಪಕ್ಕೆ ಬರುತ್ತವೋ ಇಲ್ಲವೋ ನೋಡುವವರು ಯಾರು?

ಈ ಹಿಂದೆ ಒದಗಿಸಿದ ‘ಭಾಗ್ಯಗಳು’ ಎಷ್ಟು ಭಾಗ್ಯದಾಯಕವಾಗಿವೆ ಎಂಬುದನ್ನು ಒಮ್ಮೆ ಪರಾಂಬರಿಸಿ ನೋಡಿ. ನಂತರ ಹೊಸ ‘ಭಾಗ್ಯ’ದ ಬಾಗಿಲು ತೆರೆಯಿರಿ. ಮೊದಲು ಜನರ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಪ್ರಯತ್ನಿಸಿ. ನೆರವಾಗದಿದ್ದರೂ ಪರವಾಗಿಲ್ಲ. ಬಲ್ಬಿನ ಹೆಸರಿನಲ್ಲಿ ಭಾರವನ್ನು ಹೇರಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.