ADVERTISEMENT

ಕಣ್ಣೀರಿನ ನೆಂಟ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಮೇ 2016, 19:41 IST
Last Updated 26 ಮೇ 2016, 19:41 IST

ಪುಣೆಯ ರೈತರೊಬ್ಬರು ಒಂದು ಟನ್‌ ಈರುಳ್ಳಿ ಬೆಳೆದು ಕೇವಲ ಒಂದು ರೂಪಾಯಿ ಆದಾಯ ಪಡೆದ ಸುದ್ದಿ (ಪ್ರ.ವಾ., ಮೇ 25) ಆಘಾತಕಾರಿಯಾದುದು.

ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಹಿಂದೆ ಇಂತಹ ಕರುಣಾಜನಕ ಕತೆಗಳಿವೆ. ನಾಲ್ಕಾರು ತಿಂಗಳ ಕಾಲ ಶ್ರಮದಿಂದ ಮತ್ತು ಬಹು ನಿರೀಕ್ಷೆಯಿಂದ ರೈತರು ಬೆಳೆ ಬೆಳೆದಿದ್ದರೂ ಮಾರುಕಟ್ಟೆ ಮಾಯೆಯಿಂದಾಗಿ ನಾನಾ ತರದ ಶೋಷಣೆಗೆ ಒಳಗಾಗುತ್ತಿದ್ದಾರೆ.

ಈರುಳ್ಳಿ ಯಾವತ್ತೂ ರೈತರ ಕಣ್ಣಲ್ಲಿ ಇಲ್ಲವೇ ಗಿರಾಕಿಗಳ ಕಣ್ಣಲ್ಲಿ ನೀರು ತರಿಸುತ್ತಾ ಬಂದಿದೆ. ಬೆಳೆ ಸಮೃದ್ಧಿಯಿಂದ ಬೆಲೆ ಕುಸಿದಾಗ ರೈತರ ಬದುಕು ಬೀದಿಗೆ ಬರುತ್ತದೆ. ಬರ- ನೆರೆಗಳಿಂದ ಉತ್ಪಾದನೆ ಕಡಿಮೆಯಾಗಿ ಬೆಲೆ ಆಕಾಶಕ್ಕೇರಿದಾಗ ಕೊಳ್ಳುವ ಜನಸಾಮಾನ್ಯರು ಕಣ್ಣೀರು ಸುರಿಸುವಂತಾಗುತ್ತದೆ.

ಇಷ್ಟಕ್ಕೆಲ್ಲ ಕಾರಣ ಸರ್ಕಾರಗಳು ಈರುಳ್ಳಿ ಮಾರುಕಟ್ಟೆಯನ್ನು ಸರಿಯಾಗಿ ನಿರ್ವಹಿಸದಿರುವುದು, ಈರುಳ್ಳಿಯ ಬಂಪರ್‌ ಬೆಳೆ ಬಂದಾಗ ತಕ್ಷಣ ರಫ್ತು ಮಾಡುವುದು,

ಉತ್ಪಾದನೆ ಕುಂಠಿತವಾಗುವ ಮುನ್ಸೂಚನೆ ಸಿಗುತ್ತಲೇ ಆಮದು ಮಾಡಿಕೊಂಡು ದೇಶಿ ವಹಿವಾಟಿನಲ್ಲಿ ಸಮತೋಲನ ಸಾಧಿಸಿದರೆ ಮಾರುಕಟ್ಟೆಯಲ್ಲಿ ರೈತರು ಮತ್ತು ಗ್ರಾಹಕರಿಬ್ಬರಿಗೂ ಅನುಕೂಲವಾಗುವಂತಹ ಮಾದರಿ ಬೆಲೆಯನ್ನು ಕಾಯ್ದುಕೊಳ್ಳಬಹುದು. ಆಮದು, ರಫ್ತು ವ್ಯವಸ್ಥಿತ ಹಾಗೂ  ಮುಂದಾಲೋಚನೆಯಿಂದ ಕೂಡಿದ್ದರೆ ಈರುಳ್ಳಿ ಯಾರ ಕಣ್ಣಲ್ಲೂ ನೀರು ತರಿಸದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT