ADVERTISEMENT

ಕನ್ನಡ ಕಲಿಯಲಿ

ಜಯತೀರ್ಥ ನಾಡಗೌಡ, ವಿಜಯಪುರ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಬಿಜೆಪಿಯ ತಮಿಳುನಾಡಿನ ಉಸ್ತುವಾರಿ ವಹಿಸಿಕೊಂಡ ಶಾಸಕ ಸಿ.ಟಿ.ರವಿ ತಮಿಳು ಕಲಿಯಲು ಮುಂದಾಗಿದ್ದಾರೆ. ಆದರೆ ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಕನ್ನಡ ಕಲಿಯುವ ಗೋಜಿಗೇ ಹೋಗಿಲ್ಲ. ಹಿಂದಿ, ಇಂಗ್ಲಿಷ್‌, ತೆಲುಗಿನಲ್ಲಿ ಭಾಷಣ ಮಾಡುತ್ತಾ ಕನ್ನಡಿಗರ ಮೇಲೆ ಪರಭಾಷೆಯನ್ನು ಹೇರುತ್ತಿದ್ದಾರೆ. ಈವರೆಗೆ ನಾಯ್ಡು ಕರ್ನಾಟಕದ ಯಾವ ಸಮಸ್ಯೆ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚಿಸಿದ್ದಾರೆ?

ರಾಜ್ಯಸಭೆಯ ತಳಹದಿ ನಿಂತಿರುವುದು ರಾಜ್ಯಗಳ ಪ್ರತಿನಿಧಿತ್ವದ ಮೇಲೆ. ಆದರೆ ಈಚೆಗೆ  ರಾಜ್ಯಸಭೆಯ ಮೂಲ ಅರ್ಥಕ್ಕೆ ಎಳ್ಳುನೀರು ಬಿಟ್ಟಂತಿದೆ. ಹಿಂದೆ ಹೇಮಾಮಾಲಿನಿ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾಗಲೂ ಇದೇ ಚಿತ್ರಣವಿತ್ತು. ಭಾಷೆ ಬಾರದವರು ಜನರ ಸಮಸ್ಯೆಯನ್ನು ಹೇಗೆ ಆಲಿಸಬಲ್ಲರು? ವೆಂಕಯ್ಯ ಇನ್ನಾದರೂ ಕನ್ನಡ ಕಲಿತು, ಸಮಸ್ಯೆಗಳಿಗೆ ಸ್ಪಂದಿಸಿ, ನಮ್ಮವರು ಎನ್ನಿಸಿಕೊಳ್ಳುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.