ADVERTISEMENT

'ಕಾಮಿಡಿ ಕಿಲಾಡಿಗಳು’

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST

ಬಿಬಿಎಂಪಿ ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ ಅವರ ಮೇಲೆ ರಾಜ್ಯ ಬಿಜೆಪಿ ನಾಯಕರು ಅಮಾನತಿನ ‘ಬ್ರಹ್ಮಾಸ್ತ್ರ’ ಪ್ರಯೋಗಿಸಿದ್ದಾರೆ.

‘ಫುಟ್‌ಬಾಲ್ ಒದೆಯಲಾಗದಿದ್ದಲ್ಲಿ ಆಟಗಾರನನ್ನೇ ಒದಿ!’ ಎಂಬ ಮಾತೊಂದಿದೆ.  ಅದರಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಅನ್ನು ಬಗ್ಗುಬಡಿಯಲಾಗದ ನಾಯಕರು ಸಹಆಟಗಾರನನ್ನು ದಂಡಿಸಿದ್ದಾರೆ.

ಬಿಜೆಪಿಯಿಂದ ಸಿಡಿದುಹೋಗಿ ಕೆಜೆಪಿ ಕಟ್ಟಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಕಂಟಕವಾಗಿ ಕಾಡಿದ್ದವರೇ ಈಗ ಶಿಸ್ತಿನ ನೆಪದಲ್ಲಿ ‘ಬ್ರಿಗೇಡ್ ಗುಬ್ಬಿ’ಗಳನ್ನು ಹೊಸಕುತ್ತಿದ್ದಾರೆ. ಆಗ ‘ಬಿಜೆಪಿ ನನ್ನುಸಿರು’ ಎಂದವರೇ ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿ ‘ರಾಯಣ್ಣ ಬ್ರಿಗೇಡ್ ಬಿಡಲಾರೆ’ ಎನ್ನುತ್ತಿದ್ದಾರೆ! ಇವರ ಕಾದಾಟ ತಮಾಷೆಯಾಗಿದ್ದು, ಇವರನ್ನು ರಾಜಕೀಯ ರಂಗದ ‘ಕಾಮಿಡಿ ಕಿಲಾಡಿಗಳು’ ಎನ್ನಬಹುದು.
-ರಾ.ಜಯಸಿಂಹ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.