ADVERTISEMENT

ಕಾರಣ ಯಾರು?

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST

‘ನಮ್ಮ ಮೆಟ್ರೊ’ ಕಾಮಗಾರಿಯ ಮೊದಲ ಹಂತದ  ವೆಚ್ಚ ಪ್ರತಿ ಕಿ.ಮೀಗೆ ₹ 144 ಕೋಟಿ ಹೆಚ್ಚಾಗಲು ಕಾಮಗಾರಿಯಲ್ಲಾದ ವಿಳಂಬ ಕಾರಣ (ಪ್ರ.ವಾ., ಏ, 17). ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವವರಿಗಾಗಲಿ, ಸರ್ಕಾರಕ್ಕಾಗಲಿ ವಿಳಂಬದ ಬಗ್ಗೆ ಬೇಸರ ಇದ್ದಂತಿಲ್ಲ. ಏಕೆಂದರೆ ಹೊರೆ ಬೀಳುವುದು  ಸಾಮಾನ್ಯ ಜನರ ಮೇಲೆ.

ವಿಳಂಬಕ್ಕೆ ಕಾರಣವೇನು ಎಂಬ ಬಗ್ಗೆ ಬಿ.ಎಂ.ಆರ್‌.ಸಿ.ಎಲ್. ಈಚೆಗೆ ನಗರಾಭಿವೃದ್ಧಿಗೆ ಇಲಾಖೆಗೆ ಒಂದು ವರದಿ ಕೊಟ್ಟಿದೆಯಂತೆ. ವಿಳಂಬಕ್ಕೆ ಯಾರು ಹೊಣೆ, ಅವರ ವಿರುದ್ಧ ಕ್ರಮ ಜರುಗಿಸಲು ವರದಿಯಲ್ಲಿ ಸೂಚಿಸಲಾಗಿದೆಯೇ  ಎಂಬಂಥ  ಪ್ರಶ್ನೆಗಳಿಗೆ  ಉತ್ತರ  ತಿಳಿಯಬೇಕು.  ಪಾರದರ್ಶಕ ಆಡಳಿತದ ಭರವಸೆ ಕೊಡುವ ಸರ್ಕಾರ ಏನು ಹೇಳುತ್ತದೆ?

ಮೆಟ್ರೊ ಎಂಬ ಉಪಯುಕ್ತ ಯೋಜನೆ ವಿನಾಕಾರಣ ಬಿಳಿಯಾನೆಯಾಗಬಾರದು.
-ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.