ADVERTISEMENT

ಕಾರ್ಡ್‌ ಅವಾಂತರ

ಸುಭಾಸ ಯಾದವಾಡ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಸಾವಿರಾರು ಅನರ್ಹರು ಬಿಪಿಎಲ್ ಕಾರ್ಡ್‌ ಹೊಂದಿರುವುದು ಪತ್ತೆಯಾಗಿರುವುದು ವರದಿಯಾಗಿದೆ. ಅವರಲ್ಲಿ  ಸರ್ಕಾರಿ ನೌಕರರು, ಒಬ್ಬ ಗೆಜೆಟೆಡ್ ಅಧಿಕಾರಿ ಸಹ ಇದ್ದಾರೆ. ಇದು ಇತ್ತೀಚೆಗೆ ನಡೆಸಿದ  ತೀವ್ರ ತಪಾಸಣೆಯಲ್ಲಿ ಬೆಳಕಿಗೆ ಬಂದ ಸಂಗತಿ.

ಬೆಳಕಿಗೆ ಬರಬೇಕಾದುದು ಅದೆಷ್ಟಿದೆಯೋ? ಈ ಸಂಗತಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ. ಅವಕಾಶ ಪಡೆದ ಅನರ್ಹರದ್ದು ಎಷ್ಟು ತಪ್ಪೋ ಅಷ್ಟೇ ತಪ್ಪು ಇಲಾಖೆಯದ್ದು ಕೂಡ. ಗೆಜೆಟೆಡ್ ಅಧಿಕಾರಿಗೆ ಬಿಪಿಎಲ್ ಕಾರ್ಡ್‌ ಕೊಡುವಾಗ ಇಲಾಖೆ ಕಣ್ಣು ಮುಚ್ಚಿತ್ತೇ?

ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಪಡಿತರ ಚೀಟಿ ಪಡೆಯಲಾಗದ ದುರದೃಷ್ಟವಂತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅರ್ಹರಿಗೆ ನಿಗದಿತ ಕಾಲಮಿತಿಯಲ್ಲಿ ಕಾರ್ಡ್‌ ದೊರೆಯುವಂತಾಗಬೇಕು. ಅನರ್ಹರಿಗೆ ಅದು ಸಿಗದಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸದ್ಯದ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ ಎನ್ನುವುದಾದರೆ ವ್ಯವಸ್ಥೆಯನ್ನೇ ಬದಲಿಸಲು ಸರ್ಕಾರ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.