ADVERTISEMENT

ಗಾಳಿಯಾಡುವಂತಿರಲಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಮದುವೆ  ಮಂಟಪಗಳು ಇಂದು ಗ್ರಾಮ  ಮಟ್ಟಕ್ಕೂ ತಲುಪಿವೆ. ನಗರಗಳ ಕಲ್ಯಾಣ ಮಂಟಪಗಳು ಅದ್ಧೂರಿಯಾಗಿ ಸಕಲ ಸೌಲಭ್ಯಗಳೊಂದಿಗೆ ಬೆಳೆದು ನಿಂತಿವೆ. ಬಾಡಿಗೆ ಲಕ್ಷ ದಾಟಿ ಹೋಗಿದೆ. 
 
ಅನೇಕ ಕಲ್ಯಾಣ ಮಂಟಪಗಳಲ್ಲಿ ಸಾಕಷ್ಟು ಗಾಳಿ ಆಡಲು ಅವಕಾಶವಿದ್ದರೂ, ಅಲಂಕಾರಕ್ಕಾಗಿ ಸುತ್ತ  ಬಣ್ಣ ಬಣ್ಣದ ಬಟ್ಟೆ ಇಳಿಬಿಡಲಾಗುತ್ತಿದೆ. ಇದರಿಂದಾಗಿ ಕಿಟಕಿಗಳಿಂದ ಬರುವ ಗಾಳಿ  ನಿಂತು ವಿಪರೀತ ಸೆಕೆಯಾಗುತ್ತದೆ.  
 
ಬಿಸಿಲ ಧಗೆ ಹೆಚ್ಚಾಗಿರುವ ಏಪ್ರಿಲ್, ಮೇ ತಿಂಗಳಲ್ಲಿಯೇ ಮದುವೆಗಳು ಅಧಿಕವಾಗಿ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಅಲಂಕಾರಕ್ಕಾಗಿ ಕಿಟಕಿಗಳನ್ನು ಮುಚ್ಚುವುದು ಸರಿಯಲ್ಲ. ಕಿಟಕಿಗಳನ್ನು ಮುಚ್ಚದೆಯೇ ಅಲಂಕಾರ ಮಾಡುವುದು ಸಾಧ್ಯವಿಲ್ಲವೇ? ಎಲ್ಲರೂ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕು.
ಜಿ.ಬಿ. ಕಂಬಾಳಿಮಠ, ಹುನಗುಂದ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.