ADVERTISEMENT

ಘನವಾದ ಕಲಾಪ

ಸತ್ಯಬೋಧ, ಬೆಂಗಳೂರು
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಲೋಕಾಯುಕ್ತ ಲಂಚ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಜುಲೈ 1ರಂದು ನಡೆದ ಚರ್ಚೆ ಗಾಂಭೀರ್ಯದಿಂದ ಕೂಡಿತ್ತು. ಗಮನ ಸೆಳೆಯಿತು. ಶಾಸಕರು ಕಳಕಳಿಯಿಂದ ವಾದ ಮಂಡಿಸಿದರು. 15 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದ ರಮೇಶ್‌ ಕುಮಾರ್‌ ಅವರಿಂದ ಲೋಕಾಯುಕ್ತದ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಯುವಂತಾಯಿತು.

ಕೂಗಾಟವಿಲ್ಲ, ಕೈಕೈ ಮಿಲಾಯಿಸಲಿಲ್ಲ, ಅವಾಚ್ಯ ಮಾತುಗಳಿಲ್ಲ, ಇಡೀ ಕುಟುಂಬವೊಂದು ಸಮಾಲೋಚನೆ ನಡೆಸುತ್ತಿದ್ದಂತೆ ಇತ್ತು. ನಮ್ಮ ಪ್ರತಿನಿಧಿಗಳು ಎಂದೆಂದೂ ಇದೇ ಘನತೆ, ಗಾಂಭೀರ್ಯ ಕಾಪಾಡಿಕೊಂಡರೆ, ನಮ್ಮ ಸದನ  ದೇಶಕ್ಕೆ ಮಾದರಿ ಆಗುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.