ADVERTISEMENT

ಚಿಕ್ಕ ಚಿಕ್ಕ ಆನಂದ...

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST

ಹಣದ ಉಪಯೋಗ ಮತ್ತು ಚಲಾವಣೆಯನ್ನು ಕಡಿಮೆ ಮಾಡುವ ಅಥವಾ ಇಲ್ಲದಂತೆ ಮಾಡುವ ಭರದಲ್ಲಿ ಜನರ ಚಿಕ್ಕ ಚಿಕ್ಕ ಆನಂದಗಳನ್ನು ಕಿತ್ತುಕೊಳ್ಳಬಹುದೇ? ನಗದು ಸಂಬಳ ತೆಗೆದುಕೊಂಡು ಗರಿ ಗರಿ ನೋಟುಗಳನ್ನು ಮುಟ್ಟುವ, ತಾಯಿಯ ಕೈಗೊ, ತಂದೆಯ ಕೈಗೊ ಅಥವಾ ಹೆಂಡತಿಯ ಕೈಗೊ ಕೊಟ್ಟಾಗ ಅವರು ಕಣ್ಣರಳಿಸಿ ನೋಡಿ ಪಡುವ ಸಂಭ್ರಮ ಮತ್ತು ಆನಂದವನ್ನು ಕಸಿದುಕೊಂಡಂತಾಗುವುದಿಲ್ಲವೇ?

ಸಂಬಳ ತೆಗೆದುಕೊಂಡು ಮನೆಗೆ ಬರುವಾಗ ಸಿಹಿ ತಿಂಡಿಯೊ, ಹಣ್ಣೊ, ಹೂವೊ ತಂದು ಹೆಂಡತಿ ಮತ್ತು ಮಕ್ಕಳಿಗೆ ಕೊಟ್ಟಾಗ ಅವರು ಅನುಭವಿಸುವ ಆನಂದವನ್ನು ಕಿತ್ತುಕೊಂಡಂತಾಗುವುದಿಲ್ಲವೇ? 

ಒಂದೆರಡು ನೋಟನ್ನು ತಮ್ಮನಿಗೊ, ತಂಗಿಗೊ ಕೊಟ್ಟಾಗ ಅವರ ಮನದಲ್ಲಾಗುವ ಆನಂದವನ್ನು ಕಿತ್ತುಕೊಂಡಂತಾಗುವುದಿಲ್ಲವೇ? ಇನ್ನೂ ಅನೇಕ ಸಂದರ್ಭಗಳಲ್ಲಿ ನೋಟಿನಿಂದ ಉಂಟಾಗುವ ಸಣ್ಣ ಸಣ್ಣ ಆನಂದದಿಂದ ಮನುಷ್ಯ ವಂಚಿತನಾಗುವುದಿಲ್ಲವೇ?

ಅಂತಹ ಆನಂದವನ್ನು ಯಂತ್ರ ಕೊಡಬಲ್ಲುದೇ? ಅವರ ಜೀವನದಲ್ಲಿ ಕಳೆದುಹೋದ ದಿನಗಳು ಮತ್ತೆ ಬರುತ್ತವೆಯೇ? ಅವರೂ ಯಂತ್ರ ಮಾನವರಾಗಬೇಕೇ?

ಮನುಷ್ಯನ ಜೀವನದ ಗುರಿ ಆನಂದ. ಆನಂದದ ಝರಿಯೇ ಬತ್ತಿ ಹೋದಮೇಲೆ ರೋಬೊ ತರಹದ ಮನುಷ್ಯನ ಜೀವನಕ್ಕೆ ನಮ್ಮ ದೇಶದಲ್ಲಿ ಹೊಸ ಭಾಷ್ಯ ಬರೆಯಬೇಕಾಗುತ್ತದಲ್ಲವೇ?
-ಜಿ. ನಾರಾಯಣಮೂರ್ತಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.